ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

3ಕ್ಕೇರಿದ ಇಂಗ್ಲೆಂಡ್, 5ಕ್ಕಿಳಿದ ಮಹಿ ಪಡೆ

Srinivasa Murthy VN
Updated On : 20 Aug 2014, 11:08 am

ದುಬೈ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-3ರಿಂದ ಸೋತು ಭಾರಿ ಮುಖಭಂಗ ಅನುಭವಿಸಿರುವ ಭಾರತ ತಂಡ ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಗಿಳಿದಿದೆ. ಹೊಸ ರ್ಯಾಂಕಿಂಗ್ ಪಟ್ಟಿಯ ಪ್ರಕಾರ ಭಾರತ ತಂಡ ಒಟ್ಟು 96 ಅಂಕಗಳ ಸಂಪಾದನೆಯೊಂದಿಗೆ 5ನೇ ಸ್ಥಾನದಲ್ಲಿದೆ.

ಈ ಮಧ್ಯೆ ಭಾರತದ ವಿರುದ್ಧ ಸರಣಿ ಜಯಿಸಿರುವ ಇಂಗ್ಲೆಂಡ್ ತಂಡ ಎರಡು ಸ್ಥಾನ ಮೇಲೇರಿದೆ. ಇಂಗ್ಲೆಂಡ್ ಒಟ್ಟು 104 ಅಂಕಗಳೊಂದಿಗೆ 3ನೇ ಸ್ಥಾನದ ಗೌರವ ಪಡೆದಿದೆ. ದಕ್ಷಿಣ ಆಫ್ರಿಕಾ (124 ಅಂಕ) ಮತ್ತು ಆಸ್ಟ್ರೇಲಿಯಾ (123 ಅಂಕ) ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿವೆ.

ಈ ಮಧ್ಯೆ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು 2-0ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಶ್ರೀಲಂಕನ್ನರು ಎರಡು ಸ್ಥಾನ ಮೇಲೇರಿವುದರೊಂದಿಗೆ 4ನೇ ಸ್ಥಾನ ತಲುಪಿದ್ದಾರೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಕೂಡ 96 ಅಂಕಗಳಿಸಿ ಭಾರತದ ಜೊತೆಗೆ ಅಂಕಗಳಿಕೆಯಲ್ಲಿ ಸಮನಾಗಿದೆ. ಆದರೆ ಸರಾಸರಿ ಆಧಾರದ ಮೇಲೆ 6ನೇ ಸ್ಥಾನಕ್ಕೆ ಪಾಕಿಸ್ತಾನ ತೃಪ್ತಿಗೊಳ್ಳುವಂತಾಗಿದೆ.

ಟೆಸ್ಟ್ ರ್ಯಾಂಕಿಂಗ್ ಪಟ್ಟಿ:
1.ದಕ್ಷಿಣ ಆಫ್ರಿಕಾ (124 ಅಂಕ)

2. ಆಸ್ಟ್ರೇಲಿಯಾ (123 ಅಂಕ)

3.ಇಂಗ್ಲೆಂಡ್ (104 ಅಂಕ)

4.ಶ್ರೀಲಂಕಾ (101 ಅಂಕ)

5.ಭಾರತ (96 ಅಂಕ)

6.ಪಾಕಿಸ್ತಾನ (96 ಅಂಕ)

7.ನ್ಯೂಜಿಲೆಂಡ್ (93ಅಂಕ)

8.ವೆಸ್ಟ್ ಇಂಡೀಸ್ (74 ಅಂಕ)

9.ಜಿಂಬಾಂಬ್ವೆ (39 ಅಂಕ)

10.ಬಾಂಗ್ಲಾದೇಶ (21 ಅಂಕ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement