ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ರಿಕೆಟಿಗರ ಗೆಳತಿಯರಿಗೆ ನಿಷೇಧ ಹೇರಿದ ಬಿಸಿಸಿಐ

ಪ್ರವಾಸದ ವೇಳೆ ಕ್ರಿಕೆಟಿಗರ ಗೆಳತಿಯರಿಗೆ ನಿಷೇಧ ಹೇರಲು ಬಿಸಿಸಿಐ ನಿರ್ಧಾರ

Srinivasa Murthy VN
Updated On : 22 Aug 2014, 9:41 am

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಡಂಕನ್ ಫ್ಲೆಚರ್ ಮತ್ತು ಅವರ ಸಹಾಯಕ ಸಿಬ್ಬಂಧಿಗೆ ಕೋಕ್ ನೀಡಿರುವ ಬಿಸಿಸಿಐ, ಈಗ ವಿದೇಶ ಪ್ರವಾಸದ ವೇಳೆ ಆಟಗಾರರ ಪತ್ನಿ ಹಾಗೂ ಗೆಳತಿಯರ ಮೇಲೂ ನಿರ್ಬಂಧ ಹೇರಲು ನಿರ್ಧರಿಸಿದೆ.

ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಬಿಸಿಸಿಐ ವಿದೇಶ ಪ್ರವಾಸದ ವೇಳೆ ಆಟಾಗರರು ತಮ್ಮ ಪತ್ನಿ ಹಾಗೂ ಗೆಳತಿಯರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದೆ. ಪ್ರವಾಸದ ಆರಂಭದಲ್ಲಿ ಭಾರತದ ವಿರಾಟ್ ಕೊಹ್ಲಿ ತಮ್ಮ ಗೆಳತಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಿತ್ತು. ಆದರೆ ಸರಣಿಯಲ್ಲಿ ಕೊಹ್ಲಿ, 10 ಇನ್ನಿಂಗ್ಸ್‌ಗಳಿಂದ ಕೇವಲ 134ರನ್‌ಗಳಿಸಿ, ತಮ್ಮ ವೃತ್ತಿ ಜೀವನದ ಕೆಟ್ಟ ಪ್ರದರ್ಶನ ತೋರಿದ್ದರು.

ಹಾಗಾಗಿ ಮುಂದಿನ ದಿನಗಳಲ್ಲಿ ಆಟಗಾರರು ತಮ್ಮ ಪತ್ನಿ ಹಾಗೂ ಗೆಳತಿಯರೊಂದಿಗೆ ಕಾಲ ಕಳೆಯುವ ಸಮಯಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಿರುವುದಾಗಿ ಬಿಸಿಸಿಆ ಅಧಿಕಾರಿಗಳು ತಿಳಿಸಿದ್ದಾರೆ. ಇಂಗ್ಲೆಂಡ್ ಪ್ರವಾಸ ಎಲ್ಲರ ಕಣ್ಣು ತೆರೆಸಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಆಟಗಾರರೂ ಸಹ ಕ್ರಿಕೆಟ್ ಬಗ್ಗೆ ಗಮನಹರಿಸಲು ಸಿದ್ಧರಿದ್ದರೂ, ಅವರ ಪತ್ನಿ ಹಾಗೂ ಗೆಳತಿಯರ ಉಪಸ್ಥಿತಿ ಅವರ ಗಮನವನ್ನು ಬದಲಿಸಿದ್ದಾಗಿ ತಿಳಿದುಬಂದಿದೆ.

ಆಟಗಾರರು ನೆಟ್ಸ್ ಅಥವಾ ಜಿಮ್‌ಗೆ ತೆರಳಲು ಬಯಸಿದರೆ, ಅವರ ಜತೆಗಾರ್ತಿಯರು ಅಲ್ಲಿನ ನಗರವನ್ನು ಸುತ್ತಲು ಕರೆದೊಯ್ಯುತ್ತಿದ್ದರು. ಹಾಗಾಗಿ ಪ್ರವಾಸದ ವೇಳೆ ಆಟಗಾರರ ಜತೆಗೆ ಅವರ ಪತ್ನಿಯರ ಉಪಸ್ಥಿತಿಯ ದಿನಗಳನ್ನು ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement