ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಭ್ಯಾಸದಲ್ಲಿ ಗೆದ್ದ ಭಾರತ

ಏಕದಿನ ಸರಣಿಯಲ್ಲಿ ಚೇತರಿಕೆಯ ಹಾದಿ ಕಂಡುಕೊಳ್ಳುವ ಲಕ್ಷಣ ತೋರಿದ ಭಾರತ ಮಿಡಲ್‌ಸೆಕ್ಸ್ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 95ರನ್‌ಗಳ ಅಂತರದಿಂದ ಜಯ ಕಂಡುಕೊಂಡಿದೆ.

Srinivasa Murthy VN
Updated On : 23 Aug 2014, 1:07 am

ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಚ್‌ಸರಣಿಯಲ್ಲಿ ಹೀನಾಯ ಸೋಲನುಭವಿಸುವ ಮೂಲಕ ತೀವ್ರ ಟೀಕೆಗೊಳಗಾಗಿದ್ದ ಭಾರತ ತಂಡ, ಏಕದಿನ ಸರಣಿಯಲ್ಲಿ ಚೇತರಿಕೆಯ ಹಾದಿ ಕಂಡುಕೊಳ್ಳುವ  ಲಕ್ಷಣ ತೋರಿದೆ. ಕಾರಣ, ಶುಕ್ರವಾರ ಮಿಡಲ್‌ಸೆಕ್ಸ್ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 95ರನ್‌ಗಳ ಅಂತರದಿಂದ ಜಯ ಕಂಡುಕೊಂಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 44.2 ಓವರ್‌ಗಳಲ್ಲಿ 230ರನ್‌ಗಳ ಸಾಧಾರಣ ಮೊತ್ತದ ಸವಾಲೊಡ್ಡಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಮಿಡಲ್‌ಸೆಕ್ಸ್ ತಂಡ 39.5 ಓವರ್‌ಗಳಲ್ಲಿ 135ರನ್‌ಗಳಿಸುವಷ್ಟರಲ್ಲೇ ಆಲ್‌ಔಟ್ ಆಯಿತು. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡ ಚೇತರಿಕೆ ಕಂಡುಕೊಂಡಿದೆ.

ಮಿಡಲ್ ಸೆಕ್ಸ್ ತಂಜದ ಪರ ರೇಯಾನ್ ಹಿಗ್ಗಿನ್ಸ್ (20), ಜೇಮ್ಸ್ ಹ್ಯಾರಿಸ್ (20), ಜಾನ್ ಸಿಂಪ್ಸನ್ (19), ಆಂಡಿ ಬಲ್ಬಿರ್ನೆ(19), ಪಾಲ್ ಸ್ಟರ್ಲಿಂಗ್ (17) ಹಾಗೂ ಇಯಾನ್ ಮಾರ್ಗನ್ (16) ಅವರ ಮಾತ್ರ ಎರಡಂಕಿ ದಾಟಿದ ಬ್ಯಾಟ್ಸಮನ್‌ಗಳು ಎನಿಸಿದರು. ಆಲ್ಲದೆ ಉತ್ತಮವಾಗಿ ಬೌಲ್‌ಮಾಡಿದ ಭಾರತದ ಬೌಲರ್‌ಗಳು ಮಿಡಲ್‌ಸೆಕ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕರಣ್ ಶರ್ಮಾ 3 ವಿಕೆಟ್ ಕಬಳಿಸಿದರೆ, ಭುವನೇಶ್ವರ ಕುಮಾರ್, ಶಮಿ, ಉಮೇಶ್ ಯಾದವ್, ಧವಳ್ ಕುಲಕರ್ಣಿ ಹಾಗೂ ಆರ್.ಅಶ್ವಿನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತದ ಪರ ವಿರಾಟ್ ಕೊಹ್ಲಿ (71) ಮತ್ತು ಅಂಬಾಟಿ ರಾಯುಡು (72, ಗಾಯಗೊಂಡು ನಿವೃತ್ತಿ) ಅವರು ಅರ್ಧಶತಕ ಸಿಡಿಸಿದ್ದು, ತಂಡ 200ರ ಗಡಂದಾಟಲು ನೆರವಾಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(8) ಮತ್ತು ಶಿಖರ್ ಧವನ್ (10) ಬೇಗನೆ ಪೆವಿಲಿಯನ್‌ಗೆ ನಿರ್ಗಮಿಸುತ್ತಿದ್ದಂತೆಯೇ ಟೀಂ ಇಂಡಿಯಾ ತೀವ್ರ ಆಘಾತ ಅನುಭವಿಸಿತು. ಆಗ ಬಂದ ಕೊಹ್ಲಿ ಜತೆ, ತಕ್ಕ ಬ್ಯಾಟಿಂಗ್ ನಡೆಸುವಲ್ಲಿ ಭರವಸೆಯ ಆಟಗಾರ ಅಜಿಂಕ್ಯ ರಹಾನೆ (14) ಸಹ ವಿಫಲರಾದರು.

ಕೊಹ್ಲಿಗೆ ತಕ್ಕ ಸಾಥ್ ನೀಡಿದ್ದು ಅಂಬಾಟಿ ರಾಯುಡು, ಇಬ್ಬರ ಜೊತೆಯಾಟದಲ್ಲಿ 104ರನ್ ದಾಖಲಿಸುತ್ತಿದಂತೆಯೇ ಕೊಹ್ಲಿ 30ನೇ ಓವರ್‌ನ ಕೊನೆಯ ಎಸೆತದಲ್ಲಿ ಜಾನ್ ಸಿಂಪ್ಸನ್‌ಗೆ ಕ್ಯಾಚ್ ನೀಡಿದಾಗ ಈ ಜೋಡಿ ಬೇರ್ಪಟ್ಟಿತು. ನಂತರ 40ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಯುಡು ಗಾಯಗೊಂಡು ನಿವೃತ್ತಿ ಹೊಂದಿದರು. ಅನಂತರ ಬಂದ ಬ್ಯಾಟ್ಸಮನ್‌ಗಳು ತಕ್ಕ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಹೀಗಾಗಿ ಭಾರತ ಸಾಧಾರಣ ಮೊತಕ್ಕೆ ತೃಪ್ತಿ ಪಡಬೇಕಾಯಿತು. 75 ಎಸೆತಗಳನ್ನು ಎದುರಿಸಿದ ಕೊಹ್ಲಿ ಮೊತ್ದಲ್ಲಿ 1 ಸಿಕ್ಸರ್ 8 ಬೌಂಡರಿಗಳು ಸೇರಿದ್ದವು. ಇನ್ನು 82 ಎಸೆತಗಳನ್ನು ಎದುರಿಸಿದ ರಾಯುಡು ಮೊತ್ತದಲ್ಲಿ 8 ಬೌಂಡರಿಗಳು ಸೇರಿದ್ದವು.

ಅತಿಥೇಯ ಮಿಡಲ್‌ಸೆಕ್ಸ್ ತಂಡದ ಪರಉತ್ತಮ ಬೌಲಿಂಗ್ ಪ್ರದರ್ಶಿಸಿದ ಒಲ್ಲೀರೇನರ್ 32 ರನ್‌ನೀಡಿ 4 ವಿಕೆಟ್ ಕಬಳಿಸಿದರು. ರವಿ ಪಟೇಲ್ 56ರನ್ ನೀಡಿ2 ವಿಕೆಟ್, ಸ್ಟೀವನ್ ಫಿನ್, ಗುರುಜಿತ್ ಸಂಧು ಹಾಗೂ ಜೇಮ್ಸ್ ಹ್ಯಾರಿಸ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಭಾರತ 44.2 ಓವರ್‌ಗಳಲ್ಲಿ 230
ವಿರಾಟ್ ಕೊಹ್ಸಿ 71
ರಾಯುಡು 72
ಬೌಲಿಂಗ್: ರೇನರ್ 32ಕ್ಕೆ 4, ರವಿ ಪಟೇಲ್ 65ಕ್ಕೆ 2

ಮಿಡಲ್ ಸೆಕ್ಸ್ 39.5 ಓವರ್‌ಗಳಲ್ಲಿ 135
ರೇಯಾನ್ ಹಿಗ್ಗೀಸ್ 20, ಜೇಮ್ಸ್ ಹ್ಯಾರಿಸ್ 20
ಬೌಲಿಂಗ್: ಕರಣ್ ಶರ್ಮಾ 14ಕ್ಕೆ 3, ಭುವನೇಶ್ವರ 7ಕ್ಕೆ 1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement