ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರವಾಸದ ಮಧ್ಯದಲ್ಲೇ ಬದಲಾವಣೆ ತಂದರೆ ಪ್ರತಿಯೊಬ್ಬರಿಗೂ ಕಷ್ಟ: ದ್ರಾವಿಡ್

ಪ್ರವಾಸದ ಮಧ್ಯದಲ್ಲೇ ಬದಲಾವಣೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಕಷ್ಟವಾಗುತ್ತದೆ..

Srinivasa Murthy VN
Updated On : 24 Aug 2014, 12:42 pm

ನವದೆಹಲಿ: ಪ್ರವಾಸದ ಮಧ್ಯದಲ್ಲೇ ಬದಲಾವಣೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಕಷ್ಟವಾಗುತ್ತದೆ. ತಂಡದ ಸಿಬ್ಬಂದಿಯಲ್ಲಿ ಬದಲಾವಣೆ ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರಣಿ ಮುಗಿಯುವವರೆಗೆ ಕಾಯಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮತ್ತೊಬ್ಬ ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟೀಂ ಇಂಡಿಯಾ ನಿರ್ದೇಶಕರನ್ನಾಗಿ ನೇಮಿಸಿದ್ದು, ಈಗಿನ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ತಮಗಿದೆ ಎಂದು ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ. ಜನ ಬದಲಾವಣೆ ಬಯಸಿದರೆ ಸಮಸ್ಯೆಯಾಗದು. ವೃತ್ತಿಪರ ಕ್ರೀಡೆಯಲ್ಲಿ ಇದು ಸಹಜ ಕೂಡ. ಆದರೆ ಸದ್ಯ ಟೀಂ ಇಂಡಿಯಾದ ಸಿಬ್ಬಂದಿ ವರ್ಗದಲ್ಲಿ ಬದಲಾವಮೆ ತಂದಿರುವುದು ಅಲ್ಪಾವಧಿಗೋ ಅಥವಾ ದೀರ್ಘಾವಧಿಗೋ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಈ ಬಗ್ಗೆ ಗೊಂದಲವಿದೆ ಎಂದು ಹೇಳಿದ್ದಾರೆ.

ಆಟಗಾರರ ದೃಷ್ಟಿಯಿಂದ ಈ ಬದಲಾವಣೆ ಕೊಂಚ ಕಷ್ಟ ಎನಿಸುತ್ತದೆ. ಆದರೂ ರವಿಶಾಸ್ತ್ರಿ ಅವರು ತಂಡದಲ್ಲಿನ ಸಮಸ್ಯೆ ನಿವಾರಿಸಬಲ್ಲರು ಎಂಬ ವಿಶ್ವಾಸವಿದೆ. ಸಿಬ್ಬಂದಿ ಜೊತೆ ಆಟಗಾರರು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ತಮ್ಮ ಯಶಸ್ಸು ಮತ್ತು ವೈಫಲ್ಯಕ್ಕೆ ಆಟಗಾರರೇ ಹೊಣೆಯಾಗಿರುತ್ತಾರೆ ಎಂದಿರುವ ದ್ರಾವಿಡ್, ತಂಡದ ಹಿತಾಸಕ್ತಿಗಾಗಿ ಕೋಚ್ ಡಂಕನ್ ಫ್ಲೆಚರ್ ಮತ್ತು ರವಿಶಾಸ್ತ್ರಿ ಜೊತೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement