ಆಂಗ್ಲರ ಆಕ್ರಂದನ
6 ವಿಕೆಟ್ಗಳಿಂದ ಗೆಲುವು ಸಾಧಿಸಿದ ಭಾರತಕ್ಕೆ 2-0 ಮುನ್ನಡೆ
6 ವಿಕೆಟ್ಗಳಿಂದ ಗೆಲುವು ಸಾಧಿಸಿದ ಭಾರತಕ್ಕೆ 2-0 ಮುನ್ನಡೆ
ನಾಟಿಂಗ್ಹ್ಯಾಮ್: ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿದಂತೆ ಆಕರ್ಷಕ ಆಲ್ರೌಂಡ್ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟ್ರೆಂಟ್ ಬ್ರಿಡ್ಜ್ನಲ್ಲಿ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಈ ಜಯದೊಂದಿಗೆ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಟಾಸ್ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡ, ಉತ್ತಮ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆ ಮಾಡುವ ಮೂಲಕ ಅತಿಥೇಯ ತಂಡವನ್ನು ನಿಗದಿತ 50 ಓವರ್ಗಳಲ್ಲಿ 227 ರನ್ಗಳಿಗೆ ನಿಯಂತ್ರಿಸಿತು. ನಂತರ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಪ್ರದರ್ಶನದ ನೆರವಿನೊಂದಿಗೆ ಇನ್ನೂ 7 ಓವರ್ಗಳು ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 228ರನ್ ಗೆಲುವಿನ ದಡ ಸೇರಿತು.
ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಜಬಾವ್ದಾರಿ ನಿಭಾಯಿಸಿದ ರೀತಿ, ಇತರ ಸ್ಪಿನ್ನರ್ಗಳೊಂದಿಗೆ ಆರ್. ಅಶ್ವಿನ್ ಅತ್ಯುತ್ತಮ ಬೌಲಿಂಗ್ ಅಂಬಾಟಿ ರಾಯುಡು (64) ಮಹತ್ವದ ಅರ್ಧ ಶತಕದೊಂದಿಗೆ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ (45), ಸುರೇಶ್ ರೈನಾ (42) ಮತ್ತು ವಿರಾಟ್ ಕೊಹ್ಲಿ (40) ಅವರ ತಕ್ಕ ಬ್ಯಾಟಿಂಗ್ ತಂಡ ಜಯ ಸಾಧಿಸಲು ನೆರವಾಯಿತು.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಜೇಮ್ಸ್ ಟ್ರೆಡ್ವೆಲ್, ಸ್ಟೀವನ್ ಫಿನ್, ಬೆನ್ ಸ್ಟ್ರೋಕ್ಸ್ ಅವರು ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿ ಭಾರತದ ಸಂಘಟಿತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾದ ಅತಿಥೇಯ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತ ಕಲೆ ಹಾಕಿತ್ತು. ಟ್ರೆಂಟ್ ಬ್ರಿಡ್ಜ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಆತ್ಮ ವಿಶ್ವಾಸದಿಂದಲೇ ಕಣಕ್ಕಿಳಿಯಿತು. ಎರಡನೇ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಿದ್ದ ಮಹಿಪಡೆ, ಈ ಪಂದ್ಯದಲ್ಲಿ ಟಾಸ್ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಬೌಲರ್ಗಳಿಗೆ ಹೆಚ್ಚು ನೆರವು ನೀಡುವ ಪಿಚ್ ಆಗಿದ್ದರಿಂದ ಧೋನಿ ಈ ನಿರ್ಧಾರ ಕೈಗೊಂಡರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 227ರನ್ಗಳಿಗೆ ಆಲ್ಔಟ್ ಆಯಿತು.
ದಿಢೀರ್ ಕುಸಿತ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡದ ಪರ ಆರಂಭಿಕರಾದ ಅಲಸ್ಟೇರ್ ಕುಕ್ (44) ಹಾಗೂ ಅಲೆಕ್ಸ್ ಹಾಲ್ಸ್ (42) ಉತ್ತಮ ಆರಂಭವನ್ನೇ ನೀಡಿದರು. ಈ ಜೋಡಿ ತಂಡಕ್ಕೆ 82 ರನ್ಗಳ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿತು. ಈ ವೇಳೆ ಮತ್ತೊಮ್ಮ ಭಾರತ ಬೌಲಿಂಗ್ಗೆ ನೆರವಾಗುವ ಪಿಚ್ನ ಅನುಕೂಲ ಪಡೆಯುವಲ್ಲಿ ಭಾರತ ವಿಫಲವಾಯಿತೇ ಎಂಬ ಅನುಮಾನ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಬೌಲಿಂಗ್ನಲ್ಲಿ ಪ್ರಯೋಗಕ್ಕೆ ಮುಂದಾದ ಧೋನಿ, ಅರೆಕಾಲಿಕ ಬೌಲಿರ್ ಸುರೇಶ್ ರೈನಾಗೆ ಬೌಲಿಂಗ್ ನೀಡಿದರು.
ಈ ವೇಳೆ ರೈನಾ ಎಸೆತವನ್ನು ಸ್ವೀಪ್ ಮಾಡಲು ಮುಂದಾದ ಅಲೆಕ್ಸ್, ಚೆಂಡು ಬ್ಯಾಟ್ನ ಹೊರ ಅಂಚಿಗೆ ತಾಗಿ ಮೇಲಕ್ಕೇರಿತು. ಆಗ ಕ್ಯಾಚ್ ಹಿಡಿದ ಧೋನಿ, ಭಾರತಕ್ಕೆ ಮೊದಲ ಯಶ ದೊರಕಿಸಿಕೊಟ್ಟರು. ಮೊದಲ ವಿಕೆಟ್ ಬಿದ್ದ ನಂತರ ಇನ್ನಿಂಗ್ಸ್ ಸಂಪೂರ್ಣವಾಗಿ ನಾಟಕೀಯ ತಿರುವು ಪಡೆಯಿತು. ಒಬ್ಬೊಬ್ಬರಾಗಿಯೇ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಉಳಿದಂತೆ ಇಯಾನ್ ಬೆಲ್ 28, ಜೋ ರೂಟ್ 2, ಐಯಾನ್ ಮಾರ್ಗನ್ 10, ಬೆನ್ ಸ್ಟ್ರೋಕ್ಸ್ 2, ಕ್ರಿಸ್ವೋಕ್ಸ್ 15, ಸ್ಟೀವನ್ ಫಿನ್ 6 ರನ್ಗಳನ್ನಷ್ಟೇ ಗಳಿಸಲು ಶಕ್ತರಾದರು. ಜೋಸ್ ಬಟ್ಲರ್ (42) ಹಾಗೂ ಟ್ರೆಡ್ವೆಲ್ (30)ತಂಡದ ಮೊತ್ತವನ್ನು 200ರ ಗಡಿ ದಾಟುವಂತೆ ನೋಡಿಕೊಂಡರು. ಭಾರತದ ಪರ ಆರ್.ಅಶ್ವಿನ್ 3, ಭುವನೇಶ್ವರ್, ಶಮಿ, ರೈನಾ, ರಾಯುಡು ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.
ದಾಖಲೆ ಬರೆದ ಧೋನಿ
ಇಂಗ್ಲೆಂಡ್ ಇನ್ನಿಂಗ್ಸ್ನಲ್ಲಿ 2 ಸ್ಟಂಪೌಟ್ ಮಾಡಿದ ಧೋನಿ, ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮೂರೂ ಮಾದರಿಯ ಕ್ರಿಕೆಟ್ ಸೇರಿದಂತೆ ಅತಿ ಹೆಚ್ಚು ಸ್ಟಂಪೌಟ್ ಮಾಡಿದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಧೋನಿ ಏಕದಿನ, ಟೆಸ್ಟ್, ಹಾಗೂ ಟಿ-20 ಕ್ರಿಕೆಟ್ ಸೇರಿದಂತೆ ಒಟ್ಟು 382 ಅಂತಾರಾಷ್ಟ್ರೀಯ ಪಂದ್ಯಗಳಿಂದ 131 ಸ್ಟಂಪೌಟ್ ಮಾಡಿದ್ದಾರೆ. ಈ ಮೂಲಕ 129 ಸ್ಟಂಪೌಟ್ ಮಾಡಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ.
ನಂತರದ ಸ್ಥಾನದಲ್ಲಿ ಶ್ರೀಲಂಕಾದ ರಮೇಶ್ ಕಲುವಿತರಣ (101), ಪಾಕಿಸ್ತಾನದ ಮೋಹಿನ್ ಖಾನ್(93), ಹಾಗೂ ಆಸ್ಟ್ರೇಲಿಯಾದ ಆಡಂ ಗಿಲ್ಕ್ರಿಸ್ಟ್ (92) ಸ್ಥಾನ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಧೋನಿ ಹಾಗೂ ಸಂಗಕ್ಕಾರ 129 ಸ್ಟಂಪೌಟ್ ಮಾಡಿ ಸಮಬಲ ಸಾಧಿಸಿದ್ದರು.
ಸ್ಕೋರ್ ವಿವರ
ಇಂಗ್ಲೆಂಡ್: 50 ಓವರ್ಗಳಲ್ಲಿ 227
ಅಲಸ್ಟೇರ್ ಕುಕ್ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ಅಂಬಟಿ ರಾಯುಡು 44
ಅಲೆಕ್ಸ್ ಹೇಲ್ಸ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಸುರೇಶ್ ರೈನಾ 42
ಇಯಾನ್ ಬೆಲ್ ರನ್ ಔಟ್ (ಮೋಹಿತ್ ಶರ್ಮ) 28
ಜೋ ರೂಟ್ ಸ್ಡಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ರವೀಂದ್ರ ಜಡೇಜ 02
ಎಯೊನ್ ಮಾರ್ಗನ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಆರ್. ಅಶ್ವಿನ್ 10
ಜಾಸ್ ಬಟ್ಲರ್ ಬಿ ಆರ್. ಅಶ್ವಿನ್ 42
ಬೆನ್ ಸ್ಟೋಕ್ಸ್ ಸಿ ಸುರೇಶ್ ರೈನಾ ಬಿ ಆರ್. ಅಶ್ವಿನ್ 02
ಕ್ರಿಸ್ ವೋಕಸ್ ಸಿ ಮೋಹಿತ್ ಶರ್ಮ ಬಿ ಮೊಹಮ್ಮದ್ ಶಮಿ 15
ಜೇಮ್ಸ್ ಟ್ರೆಡ್ವೆಲ್ ಸಿ ಮತ್ತು ಭುವನೇಶ್ವರ್ ಕುಮಾರ್ 30
ಸ್ಟೀವನ್ ಫಿನ್ ರನ್ ಔಟ್ (ಅಂಬಟಿ ರಾಯುಡು/ಮಹೇಂದ್ರ ಸಿಂಗ್ ದೋನಿ) 06
ಜೇಮ್ಸ್ ಆ್ಯಂಡರ್ಸನ್ ಔಟಾಗದೆ 00
ಇತರೆ: (ಲೆಗ್ ಬೈ-3, ವೈಡ್-2, ನೋ ಬಾಲ್-1) 06
ವಿಕೆಟ್ ಪತನ: 1-82 (ಹೇಲ್ಸ್; 17.6), 2-93 (ಕುಕ್; 20.5), 3-97 (ರೂಟ್; 22.4), 4-120 (ಮಾರ್ಗನ್; 27.6), 5-138 (ಬೆಲ್; 33.2), 6-149 (ಸ್ಟೋಕ್ಸ್; 35.4), 7-182 (ವೋಕಸ್; 44.6), 8-202 (ಬಟ್ಲರ್; 47.2), 9-226 (ಟ್ರೆಡ್ವೆಲ್; 49.5), 10-227 (ಫಿನ್; 49.6).
ಬೌಲಿಂಗ್: ಭುವನೇಶ್ವರ್ ಕುಮಾರ್ 8-0-45-1, ಮೋಹಿತ್ ಶರ್ಮ 3-0-17-0, ಮೊಹಮ್ಮದ್ ಶಮಿ 9-0-40-1, ರವಿಚಂದ್ರನ್ ಅಶ್ವಿನ್ 10-0-39-3, ಸುರೇಶ್ ರೈನಾ 8-0-37-1, ಅಂಬಟಿ ರಾಯುಡು 2-0-8-1, ರವೀಂದ್ರ ಜಡೇಜ 10-0-38-1.
ಭಾರತ: 43 ಓವರ್ಗಳಲ್ಲಿ 4 ವಿಕೆಟ್ 228
ಅಜಿಂಕ್ಯ ರಹಾನೆ ಸಿ ಜಾಸ್ ಬಟ್ಲರ್ ಬಿ ಸ್ಟೀವನ್ ಫಿನ್ 45
ಶಿಖರ್ ಧವನ್ ಸಿ ಮಾರ್ಗನ್ ಬಿ ವೋಕ್ಸ್ 16
ವಿರಾಟ್ ಕೊಹ್ಲಿ ಸಿ ಟ್ರೆಡ್ವೆಲ್ ಬಿ ಸ್ಟೋಕ್ಸ್40
ಅಂಬಟಿ ರಾಯುಡು ಔಟಾಗದೆ 64
ಸುರೇಶ್ ರೈನಾ ಸಿ ವೋಕ್ಸ್ ಬಿ ಟ್ರೆಡ್ವೆಲ್ 42
ರವೀಂದ್ರ ಜಡೇಜ ಔಟಾಗದೆ 12
ಇತರೆ: (ಲೆಗ್ ಬೈ-2, ವೈಡ್-7) 09
ವಿಕೆಟ್ ಪತನ: 1-35 (ಧವನ್; 7.2), 2-85 (ರಹಾನೆ; 17.5), 3-120 (ಕೊಹ್ಲಿ; 25.3), 4-207 (ರೈನಾ; 40.2).
ಬೌಲಿಂಗ್: ಜೇಮ್ಸ್ ಆ್ಯಂಡರ್ಸನ್ 7-0-29-0, ಕ್ರಿಸ್ ವೋಕ್ಸ್ 8-1-43-1, ಜೇಮ್ಸ್ ಟ್ರೆಡ್ವೆಲ್ 10-1-46-1, ಸ್ಟೀವನ್ ಫಿನ್ 8-0-5-1, ಬೆನ್ ಸ್ಟೋಕ್ಸ್ 6-0-31-1, ಜೋ ರೂಟ್ 4-0-27-0.
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಆರ್. ಅಶ್ವಿನ್