ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್ ಹ್ಯೂಸ್ ನಿಧನದ ಹಿನ್ನೆಲೆಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಬದಲಾಗಿದೆ. ಹೊಸ ವೇಳಾಪಟ್ಟಿಯನ್ನು ಸರಣಿಯ ಪ್ರಸಾರ ಹಕ್ಕುಗಳನ್ನು ಪಡೆದಿರುವ 'ಚಾನೆಲ್ ನೈನ್' ಸಂಸ್ಥೆ ಪ್ರಕಟಿಸಿದೆ.
ಅದರಂತೆ, ಅಡಿಲೇಡ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯವಾಗಿ ಪರಿಗಣಿಸಲ್ಪಟ್ಟಿದೆ. ಆದರೆ, ಈ ಪಂದ್ಯ ಹಿಂದೆ ಪ್ರಕಟಿಸಿದ್ದ ದಿನಾಂಕಕ್ಕಿಂತ ಮೂರು ದಿನ ಮುಂಚೆಯೇ (ಡಿ.9ರಂದು) ಶುರುವಾಗಲಿದೆ. ಇನ್ನು ಹಿಂದಿನ ವೇಳಾಪಟ್ಟಿಯಲ್ಲಿ ಮೊದಲ ಟೆಸ್ಟ್ ಎಂದಾಗಿದ್ದ ಬ್ರಿಸ್ಬೇನ್ ಟೆಸ್ಟ್ ಈಗ ಸರಣಿಯ ಎರಡನೇ ಪಂದ್ಯವಾಗಿ ಘೋಷಿಸಲ್ಪಟ್ಟಿದ್ದು, ಇದು ಡಿ. 17ರಿಂದ ಆರಂಭಗೊಳ್ಳಲಿದೆ.
ಇನ್ನುಳಿದಂತೆ, ಡಿ. 26ರಿಂದ ಮೆಲ್ಬೊರ್ನ್‌ನಲ್ಲಿ ಮೂರನೇ ಟೆಸ್ಟ್ ಹಾಗೂ ಜನವರಿ 6ರಿಂದ ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ ಆರಂಭಗೊಳ್ಳಲಿದೆ.
ಬದಲಾದ ವೇಳಾಪಟ್ಟಿ
ದಿನಾಂಕ | ಪಂದ್ಯ | ಸ್ಥಳ | ಆರಂಭದ ಸಮಯ |
ಡಿ. 9-13 | ಮೊದಲ ಟೆಸ್ಟ್ | ಅಡಿಲೇಡ್ | ಬೆಳಗ್ಗೆ 5.30ಕ್ಕೆ |
ಡಿ 17-21 | ಎರಡನೇ ಟೆಸ್ಟ್ | ಬ್ರಿಸ್ಬೇನ್ | ಬೆಳಗ್ಗೆ 5.30ಕ್ಕೆ |
ಡಿ 26 -30 | ಮೂರನೇ ಟೆಸ್ಟ್ | ಮೆಲ್ಬರ್ನ್ | ಬೆಳಗ್ಗೆ 5.00ಕ್ಕೆ |
ಜ 6 -10 | ನಾಲ್ಕನೇ ಟೆಸ್ಟ್ | ಸಿಡ್ನಿ | ಬೆಳಗ್ಗೆ 5.00ಕ್ಕೆ |