ಕ್ರೀಡೆ

ಆಜೀವ ನಿಷೇಧದಿಂದ ಸರಿತಾ ಪಾರು?

Rashmi Kasaragodu

ನವದೆಹಲಿ : ಬಾಕ್ಸರ್ ಸರಿತಾ ದೇವಿ ಅವರ ಮೇಲೆ ತೂಗುತ್ತಿದ್ದ ಆಜೀವ ನಿಷೇಧದ ಕರಿ ನೆರಳು ದೂರಾಗುವ ಲಕ್ಷಣಗಳು ಕಾಣಿಸಿವೆ. ಏಷ್ಯನ್ ಗೇಮ್ಸ್ ಪದಕ ಹಿಂದಿರುಗಿಸಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ (ಎಐಬಿಎ) ಸರಿತಾ ಮೇಲೆ ಆಜೀವ ನಿಷೇಧ ಹೇರುವುದಾಗಿ ಹೇಳಿತ್ತು. ಆದರೆ, ಸರಿತಾ ಅವರ ಮೇಲೆ ಕೆಲವು ಕಾಲಾವಧಿಯವರೆಗೆ ಅಮಾನತು ಶಿಕ್ಷೆ ವಿಧಿಸಬಹುದು ಎಂದು ಬಾಕ್ಸಿಂಗ್ ಇಂಡಿಯಾದ ಕೆಲ ಅಧಿಕಾರಿಗಳು ಸುಳಿವು ಕೊಟ್ಟಿದ್ದಾರೆ. ಸರಿತಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಐಬಿಎ ಮನವೊಲಿಸಲು, ಬಾಕ್ಸಿಂಗ್ ಇಂಡಿಯಾ ಶ್ರಮಿಸಿತ್ತು. ಈ ಹಿನ್ನೆಲೆಯಲ್ಲಿ , ಎಐಬಿಎ ಸರಿತಾ ಬಗ್ಗೆ ಮೃದು ಧೋರಣೆ ತೋರಿದೆ ಎನ್ನಲಾಗಿದೆ. ಹಾಗೊಂದು ವೇಳೆ , ಸರಿತಾ ಅವರ ಕ್ರೀಡಾ ಜೀವನಕ್ಕೆ ಜೀವದಾನ ಸಿಕ್ಕರೆ, ಆಕೆಯ ಪರವಾಗಿ ದನಿಯೆತ್ತಿದ್ದ ಸಚಿನ್ ತೆಂಡೂಲ್ಕರ್, ವಿಜೇಂದರ್ ಸಿಂಗ್, ಮೇರಿಕೋಮ್ ಅವರ ವಾದಕ್ಕೂ ಜಯ ಸಿಕ್ಕಂತಾಗುತ್ತದೆ.

SCROLL FOR NEXT