ಕಬ್ಬಡ್ಡಿ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯ (ಸಂಗ್ರಹ ಚಿತ್ರ) 
ಕ್ರೀಡೆ

ಕಬ್ಬಡ್ಡಿ ಆಡಲು ಭಾರತಕ್ಕೆ ಬರುವುದಿಲ್ಲ: ಪಾಕ್

ಕಬ್ಬಡ್ಡಿ ಆಡಲು ಮತ್ತೆಂದಿಗೂ ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳಿದೆ.

ಬಾದಲ್(ಬಾಥಿಂಡ): ಕಬ್ಬಡ್ಡಿ ಆಡಲು ಮತ್ತೆಂದಿಗೂ ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ತಂಡ ಹೇಳಿದೆ.

ಪಂಜಾಬ್ ಸರ್ಕಾರದ ಆಶ್ರಯದಲ್ಲಿ ನಡೆದ ಐದನೇ ಆವೃತ್ತಿಯ ಕಬ್ಬಡ್ಡಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಂಪೈರ್‌ಗಳು ಪಕ್ಷಪಾತ ತೋರಿದ್ದಾರೆ. ನಮ್ಮ ವಿರುದ್ಧ ಅನೇಕ ತಪ್ಪು ತೀರ್ಪುಗಳನ್ನು ನೀಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನ ಆಟಗಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದ ವೇಳೆ ಪಾಕಿಸ್ತಾನ ತಂಡ ಭಾರತದ ಎದುರು ಸೋಲನುಭವಿಸಿತು. ಆದರೆ ಈ ಪಂದ್ಯದಲ್ಲಿ ತೀರ್ಪುಗಾರರು ಭಾರತದ ಪರ ತೀರ್ಪು ನೀಡಿದ್ದು, ಪಕ್ಷಪಾತ ತೋರಿದ್ದಾರೆ. ಹಾಗಾಗಿ, ಕಬ್ಬಡ್ಡಿ ಆಡಲು ಇನ್ನೆಂದೂ ಭಾತರಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಆಟಗಾರರು ಫೈನಲ್ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆ ಮಾಡುತ್ತಲೇ ಪಾಕಿಸ್ತಾನ ಆಟಗಾರರು ಅಂತಿಮವಾಗಿ ರನ್ನರ್‌ಅಪ್ ಪ್ರಶಸ್ತಿ ಸ್ವೀಕರಿಸಿದರು.

ಈ ಮಧ್ಯೆ ಪಂಜಾಬ್ ಉಪಮುಖ್ಯಮಂತ್ರಿ ಹಾಗೂ ಟೂರ್ನಿಯ ಸಂಘಟನಾ ಸಮಿತಿ ಸದಸ್ಯರೂ ಆದ ಸುಖಬೀರ್ ಬಾದಲ್ ಮಾತನಾಡಿ, ಟೂರ್ನಿಯಲ್ಲಿ ಯಾವುದೇ ರೀತಿಯ ಪಕ್ಷಪಾತ ತೋರಲಾಗಿಲ್ಲ. ಭಾರತ ತಂಡ ಗೆಲ್ಲಬೇಕೆಂದು ಅದರ ಪರ ತೀರ್ಪು ನೀಡಿಲ್ಲ. ನ್ಯಾಯಯುತವಾಗಿಯೇ ಪಂದ್ಯ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ