ಶ್ರೀಧರ ಸವಣೂರ 140ಕಿಮೀ ಪ್ರಥಮ ಸ್ಥಾನ 
ಕ್ರೀಡೆ

ಸೈಕ್ಲಿಂಗ್: ಬಸವರಾಜ್‌ಗೆ ಚಿನ್ನದ ಪದಕ

ಶ್ರೀಧರ ಸವಣೂರ ಅವರು 140ಕಿಮೀ ದೂರದ ರೇಸ್‌ನಲ್ಲಿ ಪ್ರಥಮಸ್ಥಾನ

ಜಮಖಂಡಿ: ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆಯುತ್ತಿರುವ 19ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅತಿಥೇಯ ಕರ್ನಾಟಕದ ಬಸವರಾಜ ಕಡಪಟ್ಟಿ ಚಿನ್ನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮೂರನೇ ದಿನವಾದ ಭಾನುವಾರ ದೂರದ ರೇಸ್‌ಗಳಲ್ಲಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರೂ ಹೇಳಿಕೊಳ್ಳುವಷ್ಟು ಸಾಧನೆ ಮಾಡದಿದ್ದರೂ ಬಸವರಾಜ ಕಡಪಟ್ಟಿ ಮಾನ ಉಳಿಸಿದರು.

ತಾಲೂಕಿನ ಹುನ್ನೂರು ಗ್ರಾಮದ ಶ್ರೀಧರ ಸವಣೂರು ರೈಲ್ವೇಸ್ ತಂಡದಲ್ಲಿ ಆಡುತ್ತಿದ್ದು, ಶ್ರೀಧರ ಸವಣೂರ ಅವರು 140ಕಿಮೀ ದೂರದ ರೇಸ್‌ನಲ್ಲಿ ಪ್ರಥಮಸ್ಥಾನ ಪಡೆದುಕೊಂಡರು. ಇನ್ನು ಕರ್ನಾಟಕದ ಎನ್.ಲೋಕೇಶ ತೃತೀಯ ಸ್ಥಾನ ಪಡೆದರು.

23 ವರ್ಷದೊಳಗಿನ ಪುರುಷರ 120 ಕಿ.ಮೀ ಮಾಸ್ ಸ್ಟಾರ್ಟ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ತಮಿಳುನಾಡಿನ ಬಿ ಮುಚೇಚಶ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರೆ, ಕರ್ನಾಟಕದ ಮತ್ತೋರ್ವ ಸೈಕ್ಲಿಸ್ಟ್ ಲಕ್ಷ್ಮಣ ಕುರಣಿ ತೃತೀಯ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟಿದ್ದಾರೆ.

ಮಹಿಳೆಯರ ಎಲೈಟ್ 80ಕಿ.ಮೀ ಮಾಸ್ ಸ್ಪಾರ್ಟ್‌ನಲ್ಲಿ ಕರ್ನಾಟಕದ ಶಹರಾ ಅತ್ತಾರ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡರು.

-ಗುರುರಾಜ ವಾಳ್ವೇಕರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT