ಯುವರಾಜ್ ಸಿಂಗ್ 
ಕ್ರೀಡೆ

ಗಂಡಾಂತರ ತಪ್ಪಿಸಿಕೊಂಡ ಯುವಿ

ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ...

ರಾಜ್‌ಕೋಟ್: ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೌರಾಷ್ಟ್ರ ಹಾಗೂ ಪಂಜಾಬ್ ನಡುವಿನ ರಣಜಿ ಪಂದ್ಯದ ಸೋಮವಾರದ ದಿನದಾಟದಲ್ಲಿ ಆಡುವಾಗ ಚೆಂಡಿನ ಹೊಡೆತಕ್ಕೆ ಅವರು ತುತ್ತಾದರೂ, ಅವರು ಧರಿಸಿದ್ದ ಹೆಲ್ಮೆಟ್ ಅವರನ್ನು ಕಾಪಾಡಿತು.

ಪಂಜಾಬ್ ಇನಿಂಗ್ಸ್‌ನ 72ನೇ ಓವರ್‌ನಲ್ಲಿ ಬೌಲರ್ ವಿಶಾಲ್ ಜೋಷಿ ಅವರ ಎಸೆತವೊಂದು ಯುವರಾಜ್ ಸಿಂಗ್ ಕಣ್ತಪ್ಪಿಸಿ ಸೀದಾ ಬಂದು ಮುಖಕ್ಕೆ ಅಪ್ಪಳಿಸಿತು. ಚೆಂಡು ಅಪ್ಪಳಿಸಿದ ರಭಸಕ್ಕೆ ಯುವರಾಜ್ ಸಿಂಗ್ ನೆಲಕ್ಕುರುಳಿದರು.

ಅರೆಕ್ಷಣದಲ್ಲಿ ಸಂಭವಿಸಿದ ಈ ಘಟನೆಯಿಂದಾಗಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ದಿಗ್ಭ್ರಾಂತರಾದರು. ಯುವಿ ನೆಲಕ್ಕುರುಳಿದ ತಕ್ಷಣವೇ ಫೀಲ್ಡಿಂಗ್‌ನಲ್ಲಿದ್ದ ಎಲ್ಲಾ ಆಟಗಾರರೂ ಓಡಿ ಬಂದು ಯುವಿಯನ್ನು ಸುತ್ತುವರಿದರು. ಆದರೆ, ಎಲ್ಲರೂ ಎಣಿಸಿದಂತೆ ಅಪಾಯವೇನೂ ಸಂಭವಿಸಿರಲಿಲ್ಲ. ವೇಗವಾಗಿ ಧಾವಿಸಿ ಬಂದಿದ್ದ ಚೆಂಡು, ಯುವಿ ತೊಟ್ಟಿದ್ದ ಹೆಲ್ಮೆಟ್‌ನ ಮುಂಭಾಗದಲ್ಲಿದ್ದ ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ, ಚೆಂಡು ಮುಖಕ್ಕೆ ಅಪ್ಪಳಿಸಿಕೊಂಡಿರಲಿಲ್ಲ. ಇದರಿಂದ ಆಗಬಹುದಾಗಿದ್ದ ಅಪಾಯದಿಂದ ಅವರು ಪಾರಾಗಿದ್ದರು. ಆಟಗಾರರು ತಮ್ಮನ್ನು ಸುತ್ತುವರಿಯುವ ಮುನ್ನವೇ ಎದ್ದುನಿಂತ ಯುವಿ, ಗ್ರಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಚೆಂಡನ್ನು ಕಿತ್ತು ಹೊರತೆಗೆದರು. ಅಲ್ಲಿಗೆ ಎಲ್ಲರೂ ನಿಟ್ಟುಸಿರೂ ಬಿಡುವಂತಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT