ಇಂಡಿಯಾ ಸಿಮೆಂಟ್ಸ್ ಜಯಭೇರಿ
ಮುಂಬೈ: ನಾಯಕ ದಿನೇಶ್ ಕಾರ್ತಿಕ್‌ರ ಶತಕದ ನೆರವಿನಿಂದ ಇಂಡಿಯಾ ಸಿಮೆಂಟ್ಸ್ ತಂಡ ಬಿಸಿಸಿಐ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡದ ವಿರುದ್ಧ 10 ರನ್‌ಗಳ ರೋಚಕ ಗೆಲವು ದಾಖಲಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಹೊಂದಿದೆ. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡಿಯಾ ಸಿಮೆಂಟ್ಸ್ 298 ರನ್‌ಗಳಿಸಿತು.
ದಿನೇಶ್ ಕಾರ್ತಿಕ್ ಕೇವಲ 88 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ ಆಕರ್ಷಕ 108 ರನ್‌ಗಳಿಸಿದರು. ಉತ್ತರವಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡ 288 ರನ್‌ಗಳಿಗೆ ಪತನಗೊಂಡಿತು. ಲಕ್ಷ್ಮೀಪತಿ ಬಾಲಾಜಿ 5 ವಿಕೆಟ್ ಪಡೆದು ಇಂಡಿಯಾ ಸಿಮೆಂಟ್ಸ್‌ಗೆ ಗೆಲವು ತಂದುಕೊಟ್ಟರು.
ದಿನದ ಮತ್ತೊಂದು ಪಂದ್ಯದಲ್ಲಿ ಫುಡ್ ಕಾರ್ಪೊರೇಶನ್ ತಂಡ 3 ವಿಕೆಟ್‌ಗಳಿಂದ ಏರ್ ಇಂಡಿಯಾ ತಂಡದ ವಿರುದ್ಧ ಗೆಲವು ದಾಖಲಿಸಿತು. ಏರ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 9 ವಿಕೆಟ್ ನಷ್ಟಕ್ಕೆ 238 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ನಂತರ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 241 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ಸಿಮೆಂಟ್ಸ್ 298
(ದಿನೇಶ್ ಕಾರ್ತಿಕ್ 108, ಅಭಿನವ್ ಮುಕುಂದ್ 45, ಬಾಬಾ ಅಪರಾಜಿತ್ 41, ಚೇತನ್ ವಿಲಿಯಮ್ಸ್ 28ಕ್ಕೆ6, ಎಚ್.ಎಸ್. ಶರತ್ 69ಕ್ಕೆ2).
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 288
(ಎ. ಜೋಶಿ 75, ಎಂ.ಕೆ. ಅಬ್ಬಾಸ್ 60, ಪವನ್ ದೇಶಪಾಂಡೆ 60, ಲಕ್ಷ್ಮೀಪತಿ ಬಾಲಾಜಿ 40ಕ್ಕೆ5, ಪಿ. ಅಮರ್‌ನಾಥ್ 61ಕ್ಕೆ3, ಯೋ ಮಹೇಶ್ 39ಕ್ಕೆ2).
ಏರ್ ಇಂಡಿಯಾ 9 ವಿಕೆಟ್‌ಗೆ 238
(ಸಚಿನ್ ರಾಣಾ 72, ಮೊಹಮದ್ ಕೈಫ್ 57, ಎಸ್. ಮರಾಠೆ 52, ವಿ. ಚೌಧರಿ 43ಕ್ಕೆ3, ಜೆ. ಖಾನ್ 46ಕ್ಕೆ2, ಆರ್. ಧವನ್ 48ಕ್ಕೆ2).
ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ 7 ವಿಕೆಟ್‌ಗೆ 241
(ಎನ್. ಸೈನಿ 103, ಸೋನು ಶರ್ಮಾ 44ಕ್ಕೆ3).