ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುಸ್ತಿ ವಿಶ್ವಕಪ್‌ಗೆ ಸುಶೀಲ್, ಯೋಗೇಶ್ವರ್ ಅಲಭ್ಯ

Srinivasa Murthy VN
Updated On : 18 Feb 2014, 11:33 am

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಕುಸ್ತಿಪಟುಗಾಳದ ಸುಶೀಲ್ ಕುಮಾರ್ ಹಾಗೂ ಯೋಗೇಶ್ವರ್ ದತ್, ಫ್ರೀಸ್ಟೈಲ್ ಕುಸ್ತಿ ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ರಾಷ್ಟ್ರೀಯ ಕುಸ್ತಿ ಸಂಸ್ಥೆ ತಮ್ಮ ಈ ಇಬ್ಬರೂ ಆಟಗಾರರಿಗೆ ವಿಶ್ರಾಂತಿ ವೇಳೆಯನ್ನು ವಿಸ್ತರಿಸಿರುವ ಹಿನ್ನಲೆಯಲ್ಲಿ, ಸುಶೀಲ್ ಹಾಗೂ ಯೋಗೇಶ್ವರ್ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ. ಭಾರತೀಯ ಕುಸ್ತಿ ಸಂಸ್ಥೆಯು ಹಿರಿಯ ಕುಸ್ತಿಪಟುಗಳಿಗೆ ಕೆಲವು ಪ್ರಮುಖ ಪಂದ್ಯಾವಳಿಯನ್ನು ಪಟ್ಟಿ ಮಾಡಿದೆ. ಸಂಸ್ಥೆ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಕಾಮನ್ವೆಲ್ತ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ನಾವು ಹೆಚ್ಚಿನ ಅಭ್ಯಾಸ ನಡೆಸಲು ಸೂಚನೆ ನೀಡಲಾಗಿದೆ ಎಂದು ಸುಶೀಲ್‌ಕುಮಾರ್ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದ ಅಮಿತ್ ಕುಮಾರ್ ದಹಿಯಾ, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement