ಟೀಂ ಇಂಡಿಯಾಗೆ ಅಶೋಕ್ ಆನಂದ ಮ್ಯಾನೇಜರ್
ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಆನಂದ್ ಅವರು ಮುಂಬರುವ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಈ ವಿಷಯವನ್ನು ಪ್ರಕಟಿಸಿರುವ ಕೆಎಸ್ಸಿಎ, ಟೀಂ ಇಂಡಿಯಾಗೆ ಆಶೋಕ್ ಅವರು ಮ್ಯಾನೇಜರ್ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದೆ. ಈ ನೇಮಕದಿಂದ ಕೆಎಸ್ಸಿಎ ಹಾಗೂ ಬಿಸಿಸಿಐ ನಡುವಣ ಸಂಬಂಧ ಮತ್ತಷ್ಟು ವೃದ್ಧಿಸಲಿದೆ. ಅಲ್ಲದೆ ಈ ಸಂಬಂಧವನ್ನು ಉತ್ತಮ ರೀತಿಯಲ್ಲಿ ಮನುಂದುವರಿಸಿಕೊಂಡು ಹೋಗಲು ಕೆಎಸ್ಸಿಎ ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಅಂಪೈರ್ ನಂದನ್ ಅವರನ್ನು ಈ ಪಂದ್ಯಾವಳಿಗೆ ಟಿ.ವಿ ಅಂಪೈರ್ ಆಗಿ ನೇಮಕಮಾಡಲಾಗಿದೆ. ಈ ಇಬ್ಬರಿಗೂ ಕೆಎಸ್ಸಿಎ ಶುಭ ಹಾರೈಸಿದೆ.