ಎಮಿಲಿ ಸ್ಕಾಟ್ ಜತೆ ಡೇಟಿಂಗ್ ಖಚಿತಪಡಿಸಿದ ಶೇನ್ ವಾರ್ನ್
ಪ್ಲೇಬಾಯ್ ರೂಪದರ್ಶಿ ಎಮಿಲಿ ಸ್ಕಾಟ್ ಜತೆ ಸಂಬಂಧ ಹೊಂದಿರುವುದಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಸಾರ್ವಜನಿಕವಾಗಿ ಖಚಿತಪಡಿಸಿದ್ದಾರೆ.
ಲಂಡನ್: ಪ್ಲೇಬಾಯ್ ರೂಪದರ್ಶಿ ಎಮಿಲಿ ಸ್ಕಾಟ್ ಜತೆ ಸಂಬಂಧ ಹೊಂದಿರುವುದಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಸಾರ್ವಜನಿಕವಾಗಿ ಖಚಿತಪಡಿಸಿದ್ದಾರೆ.
ಕಳೆದ ತಿಂಗಳು ಶೇನ್ ವಾರ್ನ್ ಅವರು ಎಮಿಲಿ ಸ್ಕಾಟ್ ಜತೆ ಕಿಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ತಮ್ಮ ಸ್ನೇಹಿತ ಆಸೀ ನಿಕ್ ಕಿರ್ಗಿಯೋಸ್ ಮತ್ತು ಮಿಲೋಸ್ ರಾವೋನಿಕ್ ಅವರೊಂದಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಲಂಡನ್‌ಗೆ ಪ್ರಯಾಣ ಬೆಳೆಸುತ್ತಿರುವ ವಾರ್ನ್ ಅವರು, ಎಮಿಲಿಯೊಂದಿಗೆ ಸಂಬಂಧ ಹೊಂದಿರುವ ಕುರಿತು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.
'ನಾನು ನನ್ನ ಗರ್ಲ್‌ಫ್ರೆಂಡ್ ಎಮಿಲಿ ಸ್ಕಾಟ್ ಜತೆ ಡೇಟಿಂಗ್ ಮಾಡತ್ತಿದ್ದೇನೆ. ಧೂಮ್ರಪಾನ ಮಾಡುವ ಹಾಗೆ ಕಾಣುವ ಎಮಿಲಿ ತುಂಬಾ ಹಾಟ್ ಆಗಿ ಕಾಣುತ್ತಾರೆ' ಎಂದು ಶೇನ್ ವಾರ್ನ್ ಅವರು ಟ್ವಿಟ್‌ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ ಲಂಡನ್‌ನಲ್ಲಿ ಜತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರಂತೆ. ಅಲ್ಲದೆ, ಇಬ್ಬರೂ ಜತೆಯಾಗಿ ಇತ್ತೀಚೆಗೆ ಪ್ಯಾರೀಸ್‌ನಲ್ಲಿ ಕಾಲ ಕಳೆದಿದ್ದು ಬಹಿರಂಗವಾಗಿತ್ತು.
ಈ ಮುನ್ನ ಎಲಿಜಬೆತ್ ಹರ್ಲಿ ಅವರೊಂದಿಗೆ ಸಂಬಂಧ ಹೊಂದಿದ್ದ ವಾರ್ನ್, ಸ್ಕಾಟ್ ಜತೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧ ಹೊಂದಿರುವುದಾಗಿ ವದಂತಿಗಳು ಹರಡಿದ್ದವು. ಈಗ ಅದು ಖಚಿತಪಟ್ಟಿದೆ.