ಶರಪೋವಾ ವಿರುದ್ಧ ಮುಂದುವರಿದ ತೆಂಡೂಲ್ಕರ್ ಅಭಿಮಾನಿಗಳ ಕಿಡಿ
ನವದೆಹಲಿ: ವಿಶ್ವ ಕ್ರಿಕೆಟ್ನ ದಿಗ್ಗಜ ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ ಎಂದಿರುವ ರಷ್ಯಾ ಟೆನಿಸ್ ತಾರೆ ಮಾರಿಯಾ ಶರಪೋವಾ ವಿರುದ್ಧ ಅಭಿಮಾನಿಗಳು ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಟೆನಿಸ್ನಲ್ಲಿ ನಿವೊಬ್ಬ ತಾರಾ ಆಟಗಾರ್ತಿಯಾಗಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ, ಆದರೆ ಇನ್ನು ಮುಂದೆ ನಿಮ್ಮ ಯಾವುದೇ ಪಂದ್ಯವನ್ನು ನೋಡುವುದಿಲ್ಲ ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಇನ್ನು ಹಲವು ರೀತಿಯಲ್ಲಿ ಹಾಸ್ಯಾಸ್ಪದ, ಟೀಕೆಯಾಗಿ ಪ್ರತಿಕ್ರಿಯೆಗಳು ಬಂದಿವೆ. ಅಲ್ಲದೆ ಗುರುವಾರ ಮಧ್ಯಾಹ್ನದ ವೇಳೆಗೆ ಶರಪೋವಾ ಅವರ ಫೇಸ್ಬುಕ್ ಅಕೌಂಟ್ಗೆ 50 ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿದ್ದವು.
ಸಚಿನ್ ಯಾರು? ಗೊತ್ತಿಲ್ಲ ಎಂದು ಶರಪೋವಾ ಹೇಳುತ್ತಿದ್ದಂತೆಯೇ ಆಕೆಯ ವಿರುದ್ಧ ಟೀಕೆಗಳ ಸುರಿಮಳೆ ಆರಂಭವಾಗಿದೆ.