ಯುವಿ ಮಿಂಚಿನ ಶತಕ ಎಂಸಿಸಿ ಬೃಹತ್ ಮೊತ್ತ
ಲಂಡನ್: ಆರಂಭಿಕ ಆಘಾತದ ನಂತರ ಭಾರತದ ಯುವರಾಜ್ ಸಿಂಗ್ (132) ಸಿಡಿಸಿದ ಅಮೋಘ ಶತಕದ ನೆರವಿನೊಂದಿಗೆ ರೆಸ್ಟ್ ಆಫ್ ದ ವರ್ಲ್ಡ್ ಇಲೆವೆನ್ ತಂಡ, ಸಚಿನ್ ತೆಂಡೂಲ್ಕರ್ ನಾಯಕತ್ವದ ಮೆರ್ಲ್ಬೋನ್ ಕ್ರಿಕೆಟ್ ಕ್ಲಬ್ಗೆ (ಎಂಸಿಸಿ) 294 ರನ್ಗಳ ಕಠಿಣ ಸವಾಲೊಡ್ಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶೇನ್ ವಾರ್ನ್ ನಾಯಕತ್ವದ ರೆಸ್ಟ್ ಆಫ್ ದ ವರ್ಲ್ಡ್ ತಂಡ 12 ಓವರ್ಗಳಲ್ಲಿ ಕೇವಲ 68 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಸಿಡಿಸಿದ ಶತಕದ ನೆರವಿನೊಂದಿಗೆ 7 ವಿಕೆಟ್ಗೆ 293 ರನ್ ಕಲೆಹಾಕಿತು. ಯುವಿ ಮೊತ್ತದಲ್ಲಿ 6 ಸಿಕ್ಸರ್ 8 ಬೌಂಡರಿಗಳು ಸೇರಿದ್ದವು.
ಯುವಿ ಹೊರತುಪಡಿಸಿದರೆ, ಪೌಲ್ ಕಾಲಿಂಗ್ವುಡ್ (40) ಮತ್ತು ಪೀಟರ್ ಸಿಡ್ಲ್ (ಅ. 33) ಕೊಂಚ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬ್ಯಾಟ್ಸ್ಮನ್ಗಳೆನಿಸಿದರು.
ಆರಂಭಿಕರಾದ ವೀರೇಂದ್ರ ಸೆಹ್ವಾಗ್ (22) ಮತ್ತು ಆ್ಯಡಂ ಗಿಲ್ಕ್ರಿಸ್ಟ್ (29) ಮೊದಲ ವಿಕೆಟ್ 54 ರನ್ ಕಲೆ ಹಾಕುತ್ತಿದ್ದಂತೆಯೇ, ಸೆಹ್ವಾಗ್ ವಿಕೆಟ್ ಒಪ್ಪಿಸಿದರು. ನಂತರ, 55 ರನ್ಗಳಿಗೆ ಗಿಲ್ಕ್ರಿಸ್ಟ್ ಮತ್ತು ತಮೀಮ್ ಇಕ್ಬಾಲ್ (1) ಸಹ ಸತತವಾಗಿ ವಿಕೆಟ್ ಕೈಚೆಲ್ಲಿದರು.
ಎಂಸಿಸಿ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಸಯೀದ್ ಅಜ್ಮಲ್ 45 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ರೆಸ್ಟ್ ಆಫ್ ದ ವರ್ಲ್ಡ್ ಇಲೆವೆನ್ 50 ಓವರ್ಗಳಲ್ಲಿ 7 ವಿಕೆಟ್ಗೆ 293
ಯುವರಾಜ್ ಸಿಂಗ್ 132, ಪೌಲ್ ಕಾಲಿಂಗ್ವುಡ್ 40, ಪೀಟರ್ ಸಿಡ್ಲ್ ಅಜೇಯ 33, ಆ್ಯಡಂ ಗಿಲ್ಕ್ರಿಸ್ಟ್ 29, ವೀರೇಂದ್ರ ಸೆಹ್ವಾಗ್ 22.
ಬೌಲಿಂಗ್: ಸಯೀದ್ ಅಜ್ಮಲ್ 45/4, ಬ್ರೆಟ್ ಲೀ 55/2, ಸಚಿನ್ ತೆಂಡೂಲ್ಕರ್ 33/1.