ಎಳೆಯ ಬ್ಯಾಡ್ಮಿಂಟನ್ ಪ್ರತಿಭೆಗಳ ಶೋಧ
ಬೆಂಗಳೂರು: ಟಾಟಾ ಕ್ಯಾಪಿಟಲ್ ಮತ್ತು ಪ್ರಕಾಶ್ ಪಡಕೋಣೆ ಬ್ಯಾಡ್ಮಿಂಟನ್ ಆಕಾಡೆಮಿ (ಪಿಪಿಬಿಎ) ಜಂಟಿಯಾಗಿ, ಉದ್ಯಾನ ನಗರ ಬೆಂಗಳೂರಿನ 8ರಿಂದ 15ನೇ ವಯಸ್ಸಿನ ಮಕ್ಕಳಲ್ಲಿ ಪ್ರತಿಭೆಯನ್ನು ಹುಡುಕುವ 'ಟಾಟಾ ಕ್ಯಾಪಿಟಲ್ ಸೂಪರ್ ಶಟ್ಲರ್' ಪಂದ್ಯಾವಳಿ ಆಯೋಜಿಸಿವೆ. ಜುಲೈ 12ರಿಂದ ಆಗಸ್ಟ್ 10ರವರೆಗೆ ಬೆಂಗಳೂರಿನಲ್ಲಿರುವ ಕ್ಲಬ್ಗಳಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಶಿಬಿರಗಳಲ್ಲಿ ಪ್ರತಿಭೆಗಳನ್ನು ಗುರುತಿಸಲಾಗುತ್ತದೆ.
ಇದಾದ ನಂತರ 2 ದಿನ ಶಿಬಿರ ನಡೆಯುತ್ತಿದೆ. ಆಗ, ಆಗಸ್ಟ್ ಕೊನೆಯ ವಾರದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನಡೆಯುವ 2 ದಿನದ ಪಂದ್ಯಾವಳಿಗೆ ಶ್ರೇಷ್ಠ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲಿ ಗೆದ್ದವರು ಪ್ರಶಸ್ತಿ ಗೆಲ್ಲುವುದರೊಂದಿಗೆ ಪಿಪಿಬಿಎಯಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಲಿದ್ದಾರೆ.