ಕಣ್ಣೀರ ಮಡುವಿನಲ್ಲಿ ಅಭಿಮಾನಿಗಳು
ಬ್ರೆಜಿಲ್ ಫುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಹೀನಾಯ ಸೋಲನುಭವಿಸಿದಾಗ ಪಂದ್ಯ ವೀಕ್ಷಿಸುತ್ತಿದ್ದ ಬ್ರೆಜಿಲ್ನ ಅಭಿಮಾನಿಗಳ ದುಃಖ, ತಮ್ಮ ಜೀವನದಲ್ಲಿ ಎಲ್ಲವನ್ನು ಕಳೆದಕೊಂಡವರ ರೋಧನದಂತೆ ಕಂಡುಬಂದಿತು. ಅದರಲ್ಲಿ ಕೆಲ ಅಭಿಮಾನಿಗಳ ದುಃಖಿಸುತ್ತಿರುವ ದೃಶ್ಯಗಳು ಕ್ಯಾಮರಾದಲ್ಲೂ ಸೆರೆಯಾಗಿವೆ.
ಬ್ರೆಜಿಲ್ ಸೋಲಿಗೆ ಬಲಿ
ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ತಂಡ ಉಪಾಂತ್ಯದ ಸುತ್ತಿನಲ್ಲಿ ಸೋಲುಂಡಿದ್ದು, ಕೇವಲ ಬ್ರೆಜಿಲ್ ಜನತೆಗಷ್ಟೇ ಅಲ್ಲ, ವಿಶ್ವದ ಬ್ರೆಜಿಲ್ ಅಭಿಮಾನಿಗಳಿಗೆ ಬೇಸರ ತಂದಿದೆ. ಅಲ್ಲದೆ ನೇಪಾಳದಲ್ಲಿ 15 ವರ್ಷದ ಪ್ರಗ್ಯಾ ಥಾಪಾ ಎಂಬ 10ನೇ ತರಗತಿಯ ಯುವತಿಯೊಬ್ಬಳು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇನ್ನು ಭಾರತದಲ್ಲಿ ಹೆಚ್ಚು ಫುಟ್ಬಾಲ್ ಕ್ರೇಜ್ ಇರುವ ಪಶ್ಚಿಮ ಬಂಗಾಳದಲ್ಲಿ ಮಂಗಳವಾರದವರೆಗೂ ಪ್ರತಿ ಬೀದಿ ಬೀದಿಗಳಲ್ಲೂ ಬ್ರೆಜಿಲ್ ಹಾಗೂ ಅರ್ಜೆಂಟೀನಾದ ಧ್ವಜ ಹಾರಾಡುತ್ತಿದ್ದವು. ಆದರೆ ಬುಧವಾರ ಬ್ರೆಜಿಲ್ನ ಯಾವುದೇ ಧ್ವಜ ಕಾಣದೇ, ಎಲ್ಲೆಡೆ ನೀರವ ಮೌನ ಆವರಿಸಿತ್ತು.