ಡ್ರಾ ಕಂಡ ಎ ತಂಡ
ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಎ ತಂಡ, ಆತಿಥೇಯ ಎ ತಂಡದ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳಾದ ನಮನ್ ಓಜಾ (101) ಹಾಗೂ ಅಂಬಟಿ ರಾಯುಡು (100) ಅಜೇಯ ಶತಕ ದಾಖಲಿಸಿ ಮಿಂಚಿದರು.
ಬುಧವಾರ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನದಾಟದಲ್ಲಿ ಭಾರತ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 285 ರನ್ ದಾಖಲಿಸಿತ್ತು. ಇದಕ್ಕು ಮುನ್ನ ಮೂರನೇ ದಿನದಾಟದ ಮುಕ್ತಾಯಕ್ಕೆ 9 ವಿಕೆಟ್‌ಗೆ 522 ರನ್ ದಾಖಲಿಸಿದ್ದ ಆಸ್ಟ್ರೇಲಿಯಾ ಎ ತಂಡ, ನಾಲ್ಕನೇ ದಿನದಾಟ ಆರಂಭಿಸಿ ತಂಡದ ಮೊತ್ತವನ್ನು 534ಕ್ಕೆ ಆಲೌಟ್ ಆಯಿತು. ಸ್ಕೋರ್ ವಿವರ:
ಭಾರತ ಎ ಮೊದಲ ಇನಿಂಗ್ಸ್ 465ಕ್ಕೆ9 (ಡಿ)
ಆಸ್ಟ್ರೇಲಿಯಾ ಎ ಮೊದಲ ಇನಿಂಗ್ಸ್ 534
ಭಾರತ ಎ 2ನೇ ಇನಿಂಗ್ಸ್ 5 ವಿಕೆಟ್‌ಗೆ 285
(ನಮನ್ ಓಜಾ ಅಜೇಯ 101, ಅಂಬಟಿ ರಾಯುಡು ಅಜೇಯ 100, ಚಡ್ ಸಯೆರ್ 48ಕ್ಕೆ3, ಹೆನ್ರಿಕ್ಸ್ 11ಕ್ಕೆ1)