ಲಂಕೆಗೆ ಹೆದರಿದ ಹರಿಣಗಳು
ಪಳ್ಳೆಕಲೆ: ಶ್ರೀಲಂಕಾ ಬೌಲರ್‌ಗಳ ದಾಳಿಗೆ ಪ್ರತ್ಯುತ್ತರ ನೀಡಲು ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ಎಡವಿದ ಪರಿಣಾಮ ಹರಿಣಗಳ ಪಡೆ 87 ರನ್‌ಗಳ ಸೋಲನುಭವಿಸಿತು.
ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
ನಂತರ 49.2 ಓವರ್‌ಗಳಲ್ಲಿ 267 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆಂಬತ್ತಿದ ದಕ್ಷಿಣ ಆಫ್ರಿಕಾ ಕೇವಲ 180 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿ ತಲೆ ಬಾಗಿತು.
ಶ್ರೀಲಂಕಾ ತಂಡದ ಪರ ತಿಲಕರತ್ನ್ನೆ ದಿಲ್ಷಾನ್ ಆಲ್ರೌಂಡ್ ಪ್ರದರ್ಶನ ನೀಡಿದರು.
ಬ್ಯಾಟಿಂಗ್‌ನಲ್ಲಿ 90 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 86 ರನ್ ದಾಖಲಿಸಿದರೆ, ಬೌಲಿಂಗ್‌ನಲ್ಲಿ 10 ಓವರ್‌ಗಳಲ್ಲಿ 40 ರನ್‌ಗಳಿಗೆ 3 ವಿಕೆಟ್ ಕಬಳಿಸಿದರು.
ದಕ್ಷಿಣ ಆಫ್ರಿಕಾ ತಂಡದ ಪರ ಹಶೀಂ ಆಮ್ಲಾ 102 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 101 ರನ್ ದಾಖಲಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 49.2 ಓವರ್ 267
(ದಿಲ್ಷಾನ್ 86, ಜಯವರ್ದನೆ 48, ತಿರಿಮಾನೆ 36, ಮ್ಯಾಥ್ಯೂಸ್ 34, ಮೆಕ್ಲಾರೆನ್ 48ಕ್ಕೆ4)
ದ.ಆಫ್ರಿಕಾ 38.1 ಓವರ್180 (ಹಶೀಂ ಆಮ್ಲಾ 101, ವಿಲಿಯರ್ಸ್ 29, ಸ್ಟೇಯ್ನ್ 23, ಮಾಲಿಂಗಾ 24ಕ್ಕೆ4, ದಿಲ್ಷಾನ್ 40ಕ್ಕೆ3)
ಪಂದ್ಯಶ್ರೇಷ್ಠ: ತಿಲಕರತ್ನೆ ದಿಲ್ಷಾನ್