ಹಾಲೆಂಡ್ ಮಾಧ್ಯಮಗಳ ಶೋಕ
ದಿ ಹೇಗ್: ತೀವ್ರ ಕುತೂಹಲ ಮೂಡಿಸಿದ್ದ ವಿಶ್ವಕಪ್‌ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಹಾಲಂಡ್‌ಸೋತ ಹಿನ್ನೆಲೆಯಲ್ಲಿ ಅಲ್ಲಿನ ಮಾಧ್ಯಮಗಳು ಶೋಕಾಚರಣೆ ಮಾಡಿವೆ.
ಇದು ಮುಗಿದ ಅಧ್ಯಾಯ: ಪೆನಾಲ್ಟಿ ಶೂಟೌಟ್ ನಾಟಕದ ನಂತರ ಆರೆಂಜ್ ವಿಶ್ವಕಪ್ ಫೈನಲ್ ಪ್ರವೇಶಿಸುವುದರಿಂದ ವಂಚಿತವಾಯಿತು ಎಂದು ಹಾಲೆಂಡ್ ಜನಪ್ರೀಯ ನಿಯತಕಾಲಿಕೆಯೊಂದು ವರದಿ ಮಾಡಿದೆ. ಪಂದ್ಯವನ್ನು 'ಚೆಸ್ ಆಟ' ಎಂದು ಹೋಲಿಕೆ ಮಾಡಿದೆ. ಇನ್ನೊಂದು ಜನಪ್ರಿಯ ದೈನಿಕ ಡಿ ಟೆಲಿಗ್ರಾಫ್ 'ಆರೆಂಜ್‌ಗೆ ಸೋಲು' ಎಂದು ಬರೆದಿದೆ. ಹಾಲೆಂಡ್‌ನ ರಾನ್ ವ್ಲಾರ್ ಗೋಲು ಗಳಿಸಲು ಯತ್ನಿಸಿದಾಗ ಅದನ್ನು ಪವಾಡದ ರೀತಿಯಲ್ಲಿ ತಡೆದ ಅರ್ಜೆಂಟೀನಾ ಗೋಲ್ ಕೀಪರ್ ಸೆರ್ಜಿಯೋ ರೋಮೆರೋ ಅವರ ಚಿತ್ರದೊಂದಿಗೆ ಅದು ವರದಿ ಮಾಡಿದೆ.
ಸೋಲು ಗೆಲವಿನ ಪರಾಮರ್ಶೆ ಮಾಡಿರುವ ಮಾಧ್ಯಮಗಳು, ಹಾಲೆಂಡ್ ಆಟಗಾರರು ಎಲ್ಲಿ ತಪ್ಪೆಸಗಿದರು ಎಂಬುದನ್ನು ಒತ್ತಿ ಹೇಳಿವೆ.