ವೇಗದ ದಾಳಿಗೆ ಆಂಗ್ಲರ ಆಕ್ರಂದನ
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಸ್ಯಾಮ್ ರಾಬ್ಸನ್ (59) ಹಾಗೂ ಗ್ಯಾರಿ ಬ್ಯಾಲೆನ್ಸ್ (71) ಹೋರಾಟಕಾರಿ ಬ್ಯಾಟಿಂಗ್ ಹೊರತಾಗಿಯೂ..
ನಾಟಿಂಗ್ಹ್ಯಾಮ್: ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಸ್ಯಾಮ್ ರಾಬ್ಸನ್ (59) ಹಾಗೂ ಗ್ಯಾರಿ ಬ್ಯಾಲೆನ್ಸ್ (71) ಹೋರಾಟಕಾರಿ ಬ್ಯಾಟಿಂಗ್ ಹೊರತಾಗಿಯೂ, ಇಂಗ್ಲೆಂಡ್ ತಂಡ ಭಾರತ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ದಿಢೀರ್ ಕುಸಿದು ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯದ 3ನೇ ದಿನವಾದ ಶುಕ್ರವಾರ ಆಟ ಮುಂದುವರಿಸಿದ ಇಂಗ್ಲೆಂಡ್ ತಂಡ, ಚಹಾ ವಿರಾಮದ ವೇಳೆಗೆ 73 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಈ ಮೂಲಕ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ ಇನ್ನ್ನೂ 252 ರನ್ಗಳ ಹಿನ್ನಡೆಯಲ್ಲಿತ್ತು.
ಎರಡನೇ ದಿನದಾಟದ ಮುಕ್ತಾಯಕ್ಕೆ ಕ್ರೀಸ್ನಲ್ಲಿದ್ದ ರಾಬ್ಸನ್ ಹಾಗೂ ಬ್ಯಾಲೆನ್ಸ್ ದಿನದಾಟ ಆರಂಭಿಸಿ 2ನೇ ವಿಕೆಟ್ಗೆ 125 ರನ್ಗಳ ಅಮೋಘ ಜತೆಯಾಟ ನೀಡಿದರು. ಈ ಮೂಲಕ ಆಂಗ್ಲರು ಭಾರತ ಬೌಲಿಂಗ್ ದಾಳಿಯನ್ನು ಮೆಟ್ಟಿನಿಂತರು ಎಂಬ ಭಾವನೆ ಮೂಡಿತು.
ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 131 ರನ್ಗಳಿಗೆ ಕೇವಲ 1 ವಿಕೆಟ್ ಕಳೆದುಕೊಂಡು, ದಿನದ ಮೊದಲ ಅವಧಿಯನ್ನು ತನ್ನದಾಗಿಸಿಕೊಂಡಿತು. ಆದರೆ, 2ನೇ ಅವಧಿಯಲ್ಲಿ ಸಂಪೂರ್ಣ ಭಾರತೀಯ ಬೌಲರ್ಗಳ ಪರಾಕ್ರಮ ಕಂಡುಬಂತು. ಈ ಅವಧಿಯಲ್ಲಿ ಇಂಗ್ಲೆಂಡ್ 74 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಭಾರತದ ಪರ ಇಶಾಂತ್ 3, ಭುವನೇಶ್ವರ್ ಹಾಗೂ ಶಮಿ ತಲಾ 2 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ: (3ನೇ ದಿನ ಚಹಾ ವಿರಾಮಕ್ಕೆ)
ಭಾರತ ಮೊದಲ ಇನಿಂಗ್ಸ್ 457
ಇಂಗ್ಲೆಂಡ್ ಮೊದಲ ಇನಿಂಗ್ಸ್ 205ಕ್ಕೆ7
ರಾಬ್ಸನ್ ಎಲ್ಬಿಡಬ್ಲ್ಯೂ ಬಿ ಇಶಾಂತ್ 59, ಬ್ಯಾಲೆನ್ಸ್ ಎಲ್ಬಿಡಬ್ಲ್ಯೂ ಬಿ ಇಶಾಂತ್ 71, ಬೆಲ್ ಸಿ ಧೋನಿ ಬಿ ಶರ್ಮಾ 25, ರೂಟ್ ಬ್ಯಾಟಿಂಗ್ 13, ಅಲಿ ಸಿ ಧವನ್ ಬಿ ಶಮಿ 14, ಪ್ರಯರ್ ಸಿ ಧೋನಿ ಬಿ ಭುವನೇಶ್ವರ್ 5, ಸ್ಟೋಕ್ಸ್ ಸಿ ಧೋನಿ ಬಿ ಭುವನೇಶ್ವರ್ 0, ಬ್ರಾಡ್ ಬ್ಯಾಟಿಂಗ್ 1.ಇತರೆ: (ಎಲ್ಬಿ 3, ವೈಡ್ 1, ನೊಬಾಲ್ 8) ಒಟ್ಟು 12, ವಿಕೆಟ್ ಪತನ: 1-9, 2-134, 3-154, 4-172, 5-197, 6-202, 7-202
ಬೌಲಿಂಗ್ ವಿವರ:
ಭುವನೇಶ್ವರ್ 18-7-35-2, ಶಮಿ 16-3-58-2, ಇಶಾಂತ್ 19-3-64-3, ಜಡೇಜಾ 14-4-24-0, ಬಿನ್ನಿ 5-0-21-0