ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟಿ20ಗೂ ಕ್ಯಾಟಿಚ್ ವಿದಾಯ

Srinivasa Murthy VN
Updated On : 13 Jul 2014, 12:21 pm

ಮೆಲ್ಬರ್ನ್: ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಸೈಮನ್ ಕ್ಯಾಟಿಚ್ ಅವರು ಟಿ20 ಮಾದರಿಯ ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ.
ಅಲ್ಲದೆ, ಈ ವರ್ಷ ಭಾರತದಲ್ಲಿ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯಲ್ಲೂ ಭಾಗವಹಿಸುವುದಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ.
38 ವರ್ಷದ ಕ್ಯಾಟಿಚ್ 2012ರಲ್ಲೇ ಪ್ರಥಮದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ಬಿಗ್ ಬ್ಯಾಶ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕ್ಯಾಟಿಚ್ ತಂಡ ಪ್ರಶಸ್ತಿ ಗೆಲ್ಲುವಂತೆ ನೋಡಿಕೊಂಡಿದ್ದರು. ಇದರೊಂದಿಗೆ ಭಾರತದಲ್ಲಿ ಸೆಪ್ಟೆಂಬರ್ 8ರಿಂದ 30ರವರೆಗೆ ನಡೆಯಲಿರುವ ಸಿಎಲ್‌ಟಿ20 ಪಂದ್ಯಾವಳಿಗೆ ಪರ್ತ್ ಸ್ಕಾರ್ಚರ್ಸ್ ಅರ್ಹತೆ ಪಡೆದುಕೊಂಡಿದೆ.
ಕ್ಯಾಟಿಚ್ ಟಿ20 ಮಾದರಿಯಲ್ಲಿ 118 ಪಂದ್ಯಗಳನಾಡಿದ್ದು, 30.28 ಸರಾಸರಿಯಲ್ಲಿ 2483 ರನ್ ಗಳಿಸಿದ್ದಾರೆ. 126.61 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 118 ಟಿ20 ಪಂದ್ಯಗಳಲ್ಲಿ ಅವರು ಮೂರು ಬಾರಿ ಮಾತ್ರ ಆಸ್ಟ್ರೇಲಿಯಾ ತಂಡವನು ಪ್ರತಿನಿಧಿಸಿದ್ದಾರೆ.
'ಕ್ರೀಡೆಯಲ್ಲಿ ವಿದಾಯದಂತಹ ತೀರ್ಮಾನ ತೆಗೆದುಕೊಳ್ಳುವುದು ತುಂಬಾ ಕಠಿಣವಾದದ್ದು. ಹಾಗೆಯೇ ನಾನು ನೀವೃತ್ತಿ ಹೇಳುವಾಗಲೂ ಇದು ಕಠಿಣವೆನಿಸಿತು. ಆದರೆ, ಟಿ20 ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ' ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ ಕ್ಯಾಟಿಚ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement