ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಮ್‌ಕುಮಾರ್ ರಾಮನಾಥನ್‌ಗೆ ಐಟಿಎಫ್ ಪ್ರಶಸ್ತಿ ಡಬಲ್

Srinivasa Murthy VN
Updated On : 13 Jul 2014, 12:22 pm

ಚೆನೈ: ಭಾರತದ ಉದಯೋನ್ಮುಖ ಟೆನಿಸ್ ತಾರೆ ರಾಮ್‌ಕುಮಾರ್ ರಾಮನಾಥನ್ ಅವರು ಸ್ಪೇನ್‌ನಲ್ಲಿ ನಡೆದ ಐಟಿಎಫ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರಾಮನಾಥನ್ ಅವರು ಮೊದಲು, ತಮ್ಮ ಜತೆಯಾಟಗಾರ ಸ್ಪೇನ್‌ನ ಡೇವಿಡ್ ಪೆರ್ಜ್ ಸಾಂಜ್ ಅವರೊಂದಿಗೆ ಶನಿವಾರ ಸ್ಪೇನ್‌ನ ಗೆಟ್‌ಕ್ಸೋದಲ್ಲಿ ನಡೆದ ಐಟಿಎಫ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ  ರಾಮ್‌ಕುಮಾರ್ ಮತ್ತು ಡೇವಿಡ್ ಜೋಡಿ, ಫೈನಲ್ ಪಂದ್ಯದಲ್ಲಿ ಪೊರ್ಚುಗಲ್‌ನ ಜಾಯೋ ಡೋಮಿಂಗಸ್ ಮತ್ತು ಸ್ಪೇನ್‌ನ ಜೋಸ್ ಆಂಟೋನ್ ಸಾಲಾಜರ್ ಮಾರ್ಟಿನ್ ಜೋಡಿಯನು 5-7, 6-3, 10-4 ಸೆಟ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು ಎಂದು ತಮಿಳುನಾಡು ಟೆನಿಸ್ ಸಂಸ್ಥೆ ತಿಳಿಸಿದೆ. ರಾಮ್‌ಕುಮಾರ್ ಅವರಿಗೆ ಪ್ರಸಕ್ತ ಋತುವಿನಲ್ಲಿ ಇದು ಮೂರನೇ ಡಬಲ್ಸ್ ಪ್ರಶಸ್ತಿಯಾಗಿದೆ.  ನಂತರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ತಮಗಿಂತ ಉನತ ರ್ಯಾಂಕಿಂಗ್ ಹೊಂದಿರುವ ಆತಿಥೇಯ ಸ್ಪೇನ್‌ನ ಮಾರ್ಕ್ ಗಿನೆರ್ ಅವರನು 6-4, 6-1 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement