ಆಸೀಸ್ ಪಡೆಗೆ ಮಿಶ್ರಾ ಕಡಿವಾಣ
ಬ್ರಿಸ್ಬೇನ್: ಆಸ್ಟ್ರೇಲಿಯಾ 'ಎ' ತಂಡ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಭಾನುವಾರ ಮೊದಲ ದಿನದಾಟ ನಿಂತಾಗ 7 ವಿಕೆಟ್ಗೆ 288 ರನ್ಗಳಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಜೇಮ್ಸ್ ಫಾಕ್ನರ್ ಮತ್ತು ಪೀಟರ್ ಫಾರೆಸ್ಟ್ ಅರ್ಧ ಶತಕ ಬಾರಿಸಿ ನೆರವಾದರು.
ಭಾರತದ ಪರ ಅಮಿತ್ ಮಿಶ್ರಾ 4 ಮತ್ತು ಉಮೇಶ್ ಯಾದವ್ 3 ವಿಕೆಟ್ ಪಡೆದು ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 'ಎ' ಮೊದಲ ಇನಿಂಗ್ಸ್ 90 ಓವರುಗಳಲ್ಲಿ 7 ವಿಕೆಟ್ಗೆ 288 (ಜೇಮ್ಸ್ ಫಾಕ್ನರ್ 94, ಪೀಟರ್ ಫಾರೆಸ್ಟ್ 77, ಅಮಿತ್ ಮಿಶ್ರಾ 114ಕ್ಕೆ4, ಉಮೇಶ್ ಯಾದವ್ 42ಕ್ಕೆ3).