ನಾ ಗೇ! ತೋರ್ಪ್
ಸಿಡ್ನಿ: ಐದು ಬಾರಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ, ಆಸ್ಟ್ರೇಲಿಯಾದ ಈಜು ತಾರೆ ಇಯಾನ್ ತೋರ್ಪ್, ತಾವು 'ಗೇ' ಎಂಬುದನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಖಚಿತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಬಗ್ಗೆ ನಿರಾಕರಿಸುತ್ತಾ ಬಂದಿದ್ದ ತೋರ್ಪ್, ಈಗ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. 'ನಾನು ನೇರ ನುಡಿಯುವುದಿಲ್ಲ. ಆದರೆ, ತ್ತೀಚೆಗೆ ನಾನು 'ಗೇ' ಎಂಬುದನ್ನು ನನ್ನ ಹತ್ತಿರದವರಿಗೆ ಖಚಿತಪಡಿಸಲು ತೀರ್ಮಾನಿಸಿದ್ದೇನೆ' ಎಂದಿದ್ದಾರೆ ತೋರ್ಪ್.
ತೋರ್ಪ್ ತಾವು ಗೇ ಎಂಬುದನ್ನು ಬಚ್ಚಿಟ್ಟುಕೊಳ್ಳಲು ಹಲ ವರ್ಷಗಳಿಂದ ನೋವುಂಡಿದ್ದರಂತೆ. 2012ರಲ್ಲಿ ಬರೆದ ತಮ್ಮ ಆತ್ಮಚರಿತ್ರೆಯಲ್ಲೂ ತಾವು 'ಗೇ' ಅಲ್ಲ ಎಂದು ಬರೆದುಕೊಂಡಿದ್ದರು.