ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಪಂದ್ಯ ಉಳಿಸಿದ ಹೆಮ್ಮೆ'

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದು ಹೆಮ್ಮೆ ಉಂಟುಮಾಡಿದೆ ಎಂದು ಸ್ಟುವರ್ಟ್ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ.

Srinivasa Murthy VN
Updated On : 15 Jul 2014, 12:20 pm

ನಾಟಿಂಗ್‌ಹ್ಯಾಮ್: ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಮಹತ್ವದ ಅರ್ಧ ಶತಕ ದಾಖಲಿಸುವ ಮೂಲಕ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದು ಹೆಮ್ಮೆ ಉಂಟುಮಾಡಿದೆ ಎಂದು ಸ್ಟುವರ್ಟ್ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ.
'ಮೊದಲ ಇನಿಂಗ್ಸ್‌ನಲ್ಲಿ ಬೇಗನೆ ಪೆವಿಲಿಯನ್‌ಗೆ ತೆರಳಿದ್ದು ಕೊಂಚ ಬೇಸರ ಉಂಟುಮಾಡಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಕ್ರೀಸ್‌ಗೆ ಇಳಿದು ಮೊದಲ 10ರಿಂದ 15 ನಿಮಿಷಗಳ ಕಾಲ ಕಠಿಣ ಶ್ರಮ ಹಾಕಿದೆ. ಅದು ಅರ್ಧ ಶತಕ ಕಲೆ ಹಾಕಲು ನೆರವಾಯಿತು. ಇದು ಸಂತಸ ಮತ್ತು ಹೆಮ್ಮೆಯನ್ನುಂಟುಮಾಡಿದೆ. ಆದರೆ, ಹಗುರ ಎಸೆತವನ್ನು ಎದುರಿಸಲು ಮಂದಾಗಿದ್ದು, ವಿಕೆಟ್ ಒಪ್ಪಿಸಲು ಕಾರಣವಾಯಿತು. ಕ್ರೀಸ್‌ಗಿಳಿಯುವ ಮುನ್ನ ಕ್ರೀಸ್‌ನಲ್ಲಿ ಹೆಚ್ಚಿನ ಸಮಯ ನಿಲ್ಲಬೇಕು ಎಂದು ತೀರ್ಮಾನಿಸಿಕೊಂಡಿದ್ದೆ' ಎಂದಿದ್ದಾರೆ ಬಿನ್ನಿ.
ನ್ಯಾಟಿಂಗ್ ಹ್ಯಾಮ್‌ನಲ್ಲಿ ಬಿನ್ನಿ (78) ಅರ್ಧ ಶತಕ ಸಿಡಿಸಿದ್ದು ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಳ್ಳಲು ಕಾರಣವಾಗಿತ್ತು. ಬಿನ್ನಿ ಈಗ ಇಂಗ್ಲೆಂಡ್ ವಿರುದ್ಧ ಉಳಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸುವ ಭರವಸೆ ಮೂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement