ಕ್ರೀಡಾ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ
ಗ್ಲ್ಲಾಸ್ಗೋ: ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿರುವ ಪಪುವಾ ನ್ಯೂ ಗಿನಿಯಾದ ಸ್ಪರ್ಧಿ ಟೋವಾ ಉಡಿಯಾ ಎಂಬುವರು ಲೈಂಗಿಕ ದೌರ್ಜನ್ಯದ ಆರೋಪವನ್ನು ಎದುರಿಸುತ್ತಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾ ಗ್ರಾಮದ ಬಳಿ ಇರುವ ಸೂಪರ್ ಮಾರುಕಟ್ಟೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.ಆದರೆ, ಅಥ್ಲೀಟ್ ಉಡಿಯಾ ತಾನು ಯಾವುದೇ ರೀತಿಯ ತಪ್ಪುಮಾಡಿಲ್ಲ. ಶುಕ್ರವಾರ ನಡೆಯಲಿರುವ ವಿಚಾರಣೆಯಲ್ಲಿ ಭಾಗವಹಿಸುತ್ತೇನೆ ಎಂದು ಉಡಿಯಾ ಹೇಳಿರುವುದಾಗಿ ಗ್ಲಾಸ್ಗೋದ ಶೆರಿಫ್ ನ್ಯಾಯಾಲಯ ಸೋಮವಾರ ತಿಳಿಸಿದೆ.
ಕಳೆದ ಸೋಮವಾರ 22 ವರ್ಷದ ವೇಟ್‌ಲಿಫ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಕ್ರೀಡಾ ಗ್ರಾಮದ ಅಧಿಕಾರಿಗಳು ವರದಿ ಸ್ವೀಕರಿಸಿದ ಮೇಲೆ, ಗ್ಲಾಸ್ಗೊ ಪೊಲೀಸರು ಆತನನ್ನು ಬಂಧಿಸಿದ್ದರು.
'ಇದೊಂದು ಆಕಸ್ಮಿಕ ಘಟನೆಯಷ್ಟೇ, ಇಂತ ಕೃತ್ಯಗಳಿಂದ ನನ್ನ ಹೆಸರಿಗೆ ಮಸಿ ಬಳಿದುಕೊಳ್ಳುವ ಅಗತ್ಯ ನನಗೆ ಇಲ್ಲ' ಎಂದು ಇಡಿಯಾ ಹೇಳಿಕೊಂಡಿದ್ದಾರೆ. ಉಡಿಯಾ ಭಾನುವಾರ ನಡೆದ 77ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದರು.