ಗೆದ್ದ ದೇವೇಂದ್ರೂ, ಬಿದ್ದ ಥಾಪ
ಗ್ಲಾಸ್ಗೋ: ಭಾರತದ ಬಾಕ್ಸರ್ ಎಲ್.ದೇವೇಂದ್ರೂ ಸಿಂಗ್ ಪುರುಷರ 49 ಕೆ.ಜಿ ವಿಭಾಗದಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದರೆ, ಮತ್ತೋರ್ವ ಭರವಸೆಯ ಬಾಕ್ಸರ್ ಶಿವ ಥಾಪ 56 ಕೆ.ಜಿ ವಿಭಾಗದಲ್ಲಿ ಆಘಾತ ಅನುಭವಿಸಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತ ದೇವೇಂದ್ರೂ ಸಿಂಗ್, ಶ್ರೀಲಂಕಾದ ಮದುಶನ್ ಗಮಾಗೆ ವಿರುದ್ಧ 2-1 ಅಂತರದ ಗೆಲವು ದಾಖಲಿಸಿದರು.
ಮೊದಲ ಸುತ್ತಿನಲ್ಲಿ ದೇವೇಂದ್ರೂ ಆರಂಭಿಕ ಮೂರು ಸುತ್ತಿನಲ್ಲಿ 3 ಅಂಪೈರ್ಗಳಿಂದ ತಲಾ 10 ಅಂಕ ಪಡೆದು ಉತ್ತಮ ಆರಂಭ ಪಡೆದರು. ನಂತರ ಅದೇ ಪ್ರದರ್ಶನ ಮುಂದುವರಿಸಿ ಗೆಲವು ದಾಖಲಿಸಿದರು.
ಇನ್ನು ಶಿವ ಥಾಪ ಪುರುಷರ 56 ಕೆ.ಜಿ ವಿಭಾಗದಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಐರ್ಲೆಂಡ್ನ ಮೈಕಲ್ ಕೋನ್ಲನ್ ವಿರುದ್ಧ 3-0 ಅಂತರದಲ್ಲಿ ಗೆಲವು ದಾಖಲಿಸಿದರು. ಆರಂಭಿಕ ಸುತ್ತಿನಲ್ಲಿ ಹೋರಾಟ ನೀಡಿದ ಶಿವ ಥಾಪ 28-30 ಅಂತರದಲ್ಲಿ ಮುಗ್ಗರಿಸಿದರು. ನಂತರದ ಎರಡು ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾಗಿ ಪರಾಭವಗೊಂಡರು.