ಟಿಟಿ: ಪುರುಷರ ತಂಡಕ್ಕೆ ಸೋಲು
ಗ್ಲಾಸ್ಗೋ: ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾದ ಭಾರತ ಪುರುಷರ ತಂಡ ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಸೋಲನುಭವಿಸಿದೆ. ಈ ಮೂಲಕ ತಂಡದ ವಿಭಾಗದಲ್ಲಿ ಪದಕವಿಲ್ಲದೆ ಬರಿಗೈಯಲ್ಲಿ ಟಿಟಿಪಟುಗಳು ಮರಳಿದ್ದಾರೆ. ಸೋಮವಾರ ನಡೆದ ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 1-3 ಅಂತರದಲ್ಲಿ ಪರಾಭವಗೊಂಡಿತು. ಭಾನುವಾರ ನಡೆದ ಪುರುಷರ ತಂಡದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 1-3 ಅಂತರದಿಂದ ಇಂಗ್ಲೆಂಡ್ ವಿರುದ್ಧ ಆಘಾತ ಅನುಭವಿಸಿದ್ದ ಭಾರತ, ನಂತರ ಕಂಚಿನ ಪದಕಕ್ಕಾಗಿ ನೈಜೀರಿಯಾ ವಿರುದ್ಧ ಸೆಣೆಸಿತು. ಈ ಮೂಲಕ ಮೊದಲ ಬಾರಿಗೆ ಭಾರತ ಟಿಟಿ ತಂಡ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗಳಿಸದೇ ಬರಿಗೈಯಲ್ಲಿ ಮರಳುವಂತಾಗಿದೆ. ಆರಂಭಿಕ ಪಂದ್ಯದಲ್ಲಿ ಶರತ್ ಕಮಲ್ 11-9, 11-5, 11-7 ಅಂತರದಲ್ಲಿ ಸೆಗುನ್ ಟೊರಿಲಾ ವಿರುದ್ಧ ಗೆಲವು ದಾಖಲಿಸಿ ಉತ್ತಮ ಆರಂಭ ನೀಡಿದರು. ನಂತರದ ಪಂದ್ಯದಲ್ಲಿ ಭಾರತೀಯ ಟಿಟಿಪಟುಗಳು ನೀರಸ ಪ್ರದರ್ಶನ ನೀಡಿದ್ದು, ತಂಡದ ಸೋಲಿಗೆ ಕಾರಣವಾಯಿತು. ಇದಕ್ಕೂ ಮುನ್ನ ಭಾನುವಾರ ತಡ ರಾತ್ರಿ ನಡೆದ ಉಪಾಂತ್ಯದ ಪಂದ್ಯದಲ್ಲಿ ಭಾರತ 0-3 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಪಂದ್ಯದಲ್ಲಿ ಡಬಲ್ಸ್ನಲ್ಲಿ ಆಂಥೋಣಿ ಮತ್ತು ಹರ್ಮಿತ್ ಜತೆಯಾಗಿ ಎದುರಾಳಿ ಜೋಡಿಯನ್ನು 7-11 16-14, 11-8, 7-11, 13-11 ಅಂತರದಲ್ಲಿ ಮಣಿಸುವ ಮೂಲಕ ಪಂದ್ಯದಲ್ಲಿ ಹೋರಾಟ ನಡೆಸಿತು. ಆದರೆ ಉಳಿದ ಗೇಮ್ಗಳಲ್ಲಿ ತಂಡ ನೀರಸ ಪ್ರದರ್ಶನ ಸೋಲಿಗೆ ಕಾರಣವಾಗಿತ್ತು.