ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಶೂಟಿಂಗ್ ಮ್ಯಾನೇಜರ್ ತಡೆ
ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ಶಾಟ್ಗನ್ ತಂಡದ ಮ್ಯಾನೇಜರ್, ನಿಷೇಧಿತ ವಸ್ತುಗಳನ್ನು ತರುತ್ತಿರುವ ಹಿನ್ನಲೆಯಲ್ಲಿ ಅವರನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಂಡದ ಮ್ಯಾನೇಜರ್ ಅರಾರುಲ್ ಹಸನ್ ಚೌಧರಿ ಪದಕ ವಿಜೇತ ಅನಿಸಾ ಸಯ್ಯದ್ ಹಾಗೂ ರಾಹಿ ಸಾಮೊಬಟ್ ಜತೆಗೆ ಭಾರತಕ್ಕೆ ಮರಳುತ್ತಿದ್ದರು.
ಹಸನ್ ಚೌಧರಿ ಅವರು ಬೇಟೆಗೆ ಬಳಸುವ ಮದ್ದು ಗುಂಡುಗಳನ್ನು ತರುತ್ತಿರುವ ವೇಳೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಭಾರತದ ರಾಷ್ಟ್ರೀಯ ರೈಫಲ್ ಸಂಸೆಯ ಮೂಲಗಳು ತಿಳಿಸಿವೆ.