ನಮ್ಮ ಅಥ್ಲೀಟ್ಗಳಿಗೆ ಸಿಗದ ದಿನ ಭತ್ಯೆ
ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟ ಆರಂಭವಾಗಿ ಸುಮಾರು ಒಂದು ವಾರ ಕಳೆದರೂ ಭಾರತೀಯ ಅಥ್ಲೀಟ್ಗಳಲ್ಲಿ ಬಹುಪಾಲು ಮಂದಿಗೆ ದಿನದ ಭತ್ಯೆ ದೊರೆತಿಲ್ಲ.
ಭಾರತದ ಪರ ಒಟ್ಟು 215 ಅಥ್ಲೀಟ್ಗಳು ಗ್ಲಾಸ್ಗೋಗೆ ತೆರಳಿದ್ದು, ಸುಮಾರು 10 ದಿನಗಳಿಂದ ಅಲ್ಲೆ ನೆಲೆಸಿದ್ದಾರೆ. ಆದರೆ ಭಾರತದ ಬಹುತೇಕ ಅಥ್ಲೀಟ್ಗಳಿಗೆ ದೊರೆಯಬೇಕಾದ ಪೂರ್ಣ ಪ್ರಮಾಣದ ದಿನ ಭತ್ಯೆ ಸಿಕ್ಕಿಲ್ಲ. ಈ ಬಾರಿ ಆಟಗಾರರಿಗೆ ಕಳೆದ ಬಾರಿಯ ರು. 1500 (25 ಅಮೆರಿಕನ್ ಡಾಲರ್)ನಿಂದ ರು. 3000 (50 ಅಮೆರಿಕನ್ ಡಾಲರ್)ಗೆ ಹೆಚ್ಚಿಸಲಾಗಿತ್ತು.
ಭಾರತದ ಸ್ಕ್ವಾಷ್ ಆಟಗಾರರಾದ ಸೌರವ್ ಘೋಶಾಲ್ ಹಾಗೂ ದೀಪಿಕಾ ಪಳ್ಳಿಕಲ್ಗೂ ಸಹ ಈ ಮೊತ್ತ ತಲುಪಿಲ್ಲ.
ನಾವು ಇದುವರೆಗೂ ಯಾವುದೇ ಹಣವನ್ನು ಪಡೆದಿಲ್ಲ. ಆದರೆ ಆದಷ್ಟು ಬೇಗ ಪಡೆಯುವ ಭರವಸೆ ಸಿಕ್ಕಿದೆ ಎಂದು ಘೋಶಾಲ್ ತಿಳಿಸಿದ್ದಾರೆ.