ಪ್ರೊ ಕಬಡ್ಡಿ ಲೀಗ್‌ಗೆ ಪಾಕ್ ಆಟಗಾರರು
ಮುಂಬೈ: ಐಪಿಎಲ್ ಮಾದರಿಯಲ್ಲಿ ಆರಂಭವಾಗಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸುತ್ತಿದ್ದಾರೆ. ಈಗಾಗಲೇ ಮೂವರು ಆಟಗಾರರು ಆಗಮಿಸಿದ್ದಾರೆ ಎಂದು ಭಾರತೀಯ ಕಬಡ್ಡಿ ಫೆಡರೇಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
'ಸೋಮವಾರ ಮುಂಬೈನಲ್ಲಿ ನಡೆದ ಪಂದ್ಯದ ಸಂದರ್ಭ ಆಟಗಾರರು ಇಲ್ಲಿಯೇ ಇದ್ದರು. ಆದರೆ, ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಪಾಕ್ ಆಟಗಾರರಿಗೆ ಬೆದರಿಕೆ ಇರುವ ಹಿನ್ನ್ನೆಲೆಯಲ್ಲಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಾವು ಅವರನ್ನ್ನು ಕಣಕ್ಕಿಳಿಸಿರಲಿಲ್ಲ. ಬುಧವಾರದಿಂದ ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಭಾಗವಹಿಸಲಿದ್ದಾರೆ' ಎಂದು ಫೆಡರೇಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ.