ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಡಬಲ್ ಧಮಾಕ

Srinivasa Murthy VN
Updated On : 30 Jul 2014, 12:25 pm

ಗ್ಲಾಸ್ಗೋ: ಭಾರತದ ಶೂಟರ್‌ಗಳು ತಮ್ಮ ಪದಕದ ಬೇಟೆಯನ್ನು ಮುಂದುವರಿಸಿದ್ದು, 50 ಮೀಟರ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಸಂಜೀವ್ ರಜಪೂತ್ ಮತ್ತು ಗಗನ್ ನಾರಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ಮಂಗಳವಾರ ನಡೆದ ಫೈನಲ್ ಸುತ್ತಿನ ಸ್ಪರ್ಧೆಯಲ್ಲಿ 446.9 ಅಂಕಗಳನ್ನು ಸಂಪಾದಿಸಿದ ಸಂಜೀವ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, 436.8 ಅಂಕಗಳನ್ನು ಕಲೆಹಾಕಿದ ಗಗನ್ ನಾರಂಗ್ ಕಂಚಿನ ಪದಕಕ್ಕೆ ಭಾಜನರಾದರು. ಇನ್ನು 452.9 ಅಂಕಗಳನ್ನು ಪಡೆದ ಇಂಗ್ಲೆಂಡ್‌ನ ಡೇನಿಯಲ್ ರಿವರ್ಸ್ ಚಿನ್ನದ ಪದಕ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement