ಮೋಯಿನ್ ಅಲಿ ವ್ರಿಸ್ಟ್ಬ್ಯಾಂಡ್ಗೆ ನಿಷೇಧ
ಲಂಡನ್: ಸೇವ್ ಗಾಜಾ ಹಾಗೂ ಫ್ರೀ ಪ್ಯಾಲೆಸ್ತೀನ್ ಎಂಬ ಘೋಷಗಳನ್ನು ಹೊಂದಿರುವ ವ್ರಿಸ್ಟ್ಬ್ಯಾಂಡ್ ಅನ್ನು ಹಾಕಿಕೊಳ್ಳದಂತೆ ಐಸಿಸಿ ಮೋಯಿನ್ ಅಲಿಗೆ ಐಸಿಸಿ ನಿಷೇಧ ಹೇರಿದೆ.
ಭಾರತ ವಿರುದ್ಧ ಸೌಥಂಪ್ಟನ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಮೋಯಿನ್ ಅಲಿ ಇದನ್ನು ಧರಿಸಿದ್ದು, ಇನ್ನು ಮುಂದೆ ಧರಿಸದಂತೆ ಐಸಿಸಿ ಪಂದ್ಯದ ರೆಫರಿ ಆಸ್ಟ್ರೇಲಿಯಾದ ಡೇವಿಡ್ ಬೂನ್ ತಿಳಿಸಿದ್ದಾರೆ.
ಆರಂಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮೋಯಿನ್ ಅಲಿ ವ್ರಿಸ್ಟ್ಬ್ಯಾಂಡ್ ಧರಿಸಲು ಬೆಂಬಲ ನೀಡಿತ್ತಾದರೂ, ಈಗ ಐಸಿಸಿ ರೆಫರಿ ಡೇವಿಡ್ ಬೂನ್ ನಿರಾಕರಿಸಿದ್ದಾರೆ.
ಐಸಿಸಿಯ ಉಡುಪು ಹಾಗೂ ಸಾಧನ ನಿಯಮವು ಯಾವುದೇ ರೀತಿಯ ರಾಜಕೀಯ, ಧಾರ್ಮಿಕ ಸಂದೇಶವನ್ನು ಅಂತಾರಾಷ್ಟ್ರೀಯ ಪಂದ್ಯದ ವೇಳೆ ಪ್ರಕಟಿಸಲು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.