ವಿಕಾಸ್ ಬೆಳ್ಳಿ ಲಿಫ್ಟ್
ಗ್ಲಾಸ್ಗೋ: ಭಾರತದ ವಿಕಾಸ್ ಠಾಕೂರ್ ಜೀವಮಾನ ಸಾಧನೆಯೊಂದಿಗೆ 20ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತವರಿಗೆ ವೇಟ್ಲಿಫ್ಟಿಂಗ್ನಲ್ಲಿ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ.
ಪುರುಷರ 85 ಕೆ.ಜಿ. ತೂಕದ ವಿಭಾಗದಲ್ಲಿ ವಿಕಾಸ್, ಒಟ್ಟು 333 ಕೆ.ಜಿ. ಭಾರ ಎತ್ತುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾದರು.
ಸ್ನ್ಯಾಚ್ನಲ್ಲಿ 150 ಕೆ.ಜಿ. ಭಾರ ಎತ್ತಿದ ಅವರು ಕ್ಲೀನ್ ಮತ್ತು ಜರ್ಕ್ನಲ್ಲಿ 183 ಕೆ.ಜಿ. ಭಾರ ಎತ್ತಿದರು. ಅಚ್ಚರಿ ಎಂದರೆ, ಕೆನಡಾದ ಪಾಸ್ಕಲ್ ಪ್ಲಾಮೋಡನ್ ಕೂಡ 333 ಕೆ.ಜಿ.ಯಷ್ಟೇ (151182) ಭಾರ ಎತ್ತುವ ಮೂಲಕ ಭಾರತೀಯ ಆಟಗಾರನೊಂದಿಗೆ ಸಮಗೌರವ ಸಾಧಿಸಿದ್ದರು. ಆದರೆ, ಕಡಿಮೆ ತೂಕ ಹೊಂದಿದ್ದರಿಂದ 20ರ ವಿಕಾಸ್ಗೆ ಬೆಳ್ಳಿ ಪದಕ ಲಭಿಸಿದರೆ, ಪಾಸ್ಕಲ್ ಮೂರನೇ ಸ್ಥಾನಕ್ಕೆ ಕುಸಿದು ಕಂಚಿನ ಪದಕಕ್ಕೆ ತೃಪ್ತಿ ಹೊಂದಬೇಕಾಯಿತು.
ನ್ಯೂಜಿಲೆಂಡ್ನ ರಿಚರ್ಡ್ ಪ್ಯಾಟರ್ಸನ್ ಓಟ್ಟು 335 ಕೆ.ಜಿ. ಭಾರ (151184) ಎತ್ತುವುದರೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪ್ಯಾಟರ್ಸನ್ ಎರಡನೇ ಪ್ರಯತ್ನದಲ್ಲಿ 184 ಕೆ.ಜಿ. ಭಾರ ಎತ್ತುವಲ್ಲಿ ವಿಫಲರಾದಾಗ ಭಾರತೀಯರು ವಿಕಾಸ್ಗೆ ಚಿನ್ನದ ಪದಕ ಲಭಿಸಬಹುದೆಂದು ಆಸೆ ಹೊಂದಿದ್ದರು. ಆದರೆ, ಮೂರನೇ ಪ್ರಯತ್ನದಲ್ಲಿ ನ್ಯೂಜಿಲೆಂಡ್ ಲಿಫ್ಟರ್ ಈ ಭಾ ಎತ್ತುವಲ್ಲಿ ಯಶಸ್ವಿಯಾಗುವದರೊಂದಿಗೆ ಭಾರತೀಯರು ನಿರಾಸೆಗೊಂಡರು.