ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಸ್ ವಿದಾಯ
ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಜಾಕ್ ಕಾಲಿಸ್ ಎಲ್ಲ ಮಾದರಿಯ ಕ್ರಿಕೆಟ್‌ಗೆ..
ಜೊಹಾನ್ನೆಸ್‌ಬರ್ಗ್: ವಿಶ್ವದ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಜಾಕ್ ಕಾಲಿಸ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಜಾಕ್ ಕಾಲಿಸ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವುದಾಗಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಬುಧವಾರ ಟ್ವಿಟರ್‌ನಲ್ಲಿ ತಿಳಿಸಿದೆ. 38 ವರ್ಷದ ಜಾಕ್ ಕಾಲಿಸ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ 2015ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಇದೇ ತಿಂಗಳ ಆರಂಭದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಿಂದ ಕಾಲಿಸ್ ಕೇವಲ 5 (4,1 ಹಾಗೂ 0) ರನ್ ದಾಖಲಿಸಿದ್ದು, ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಚಿಂತನೆ ನಡೆಸುವಂತೆ ಮಾಡಿತು. ಶ್ರೀಲಂಕಾ ವಿರುದ್ಧದ ಸರಣಿ ನಂತರ ನನ್ನ ವಿಶ್ವಕಪ್ ಕನಸು ದೂರವಿರುವುದಾಗಿ ಅರ್ಥವಾಗಿದೆ. ಆ ಸರಣಿಯಲ್ಲಿ ವೃತ್ತಿ ಜೀವನವನ್ನು ಅಂತ್ಯಗೊಳಿಸಬೇಕೆಂದು ನಿರ್ಧರಿಸಿದೆ. ಶ್ರೀಲಂಕಾ ಪ್ರವಾಸ ಕೈಗೊಂಡ ದಕ್ಷಿಣ ಆಫ್ರಿಕಾ ತಂಡ ಅದ್ಭುತವಾಗಿದೆ. ಈ ತಂಡ ಮುಂಬರುವ ಮಾರ್ಚ್‌ನಲ್ಲಿ ತವರಿಗೆ ಟ್ರೋಫಿ ತರುವ ಭರವಸೆ ಇದೆ ಎಂದು ಕಾಲಿಸ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ.
ಜಾಕ್ ಕಾಲಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಕಿ ಅಂಶ
ಮಾದರಿ ಪಂದ್ಯ ಇನಿಂಗ್ಸ್ ರನ್ ಗರಿಷ್ಠ ಸರಾಸರಿ ಶತಕ ಅರ್ಧಶತಕ ವಿಕೆಟ್ ಶ್ರೇಷ್ಠಬೌಲಿಂಗ್ ಕ್ಯಾಚ್
ಟೆಸ್ಟ್ 166 280 13289 224 55.37 45 50 292 54ಕ್ಕೆ6 200
ಏಕದಿನ 328 314 11579 139 44.36 17 86 273 30ಕ್ಕೆ5 131
ಟಿ20 25 23 666 73 35.05 0 5 12 15ಕ್ಕೆ4 7
'ಕಾಲಿಸ್ ನಮ್ಮ ತಲೆಮಾರಿನ ಗ್ಯಾರಿ ಸೋಬರ್ಸ್'
-ರಾಹುಲ್ ದ್ರಾವಿಡ್, ಭಾರತದ ಮಾಜಿ ನಾಯಕ