ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ರೀಡಾಕೂಟ ಜರಿದಿಲ್ಲ-ಬೋಲ್ಟ್

Srinivasa Murthy VN
Updated On : 30 Jul 2014, 11:44 am

ಗ್ಲಾಸ್ಗೋ: ಪ್ರಸ್ತುತ ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ 20ನೇ ಕಾಮನ್ವೆಲ್ತ್ ಕ್ರೀಡಾಕೂಟವನ್ನು ತಾವು ಜರಿದಿದ್ದಾರೆ ಎಂಬ ಬಗ್ಗೆ ಪ್ರಕಟವಾಗಿರುವ ವರದಿಯನ್ನು ಖ್ಯಾತ ಓಟಗಾರ ಜಮೈಕಾದ ಹುಸೇನ್ ಬೋಲ್ಟ್ ತಳ್ಳಿ ಹಾಕಿದ್ದಾರೆ. 100 ಮೀಟರ್ ಓಟದ ಚಾಂಪಿಯನ್ ಬೋಲ್ಟ್ ಅವರು, ಕ್ರೀಡಾ ಗ್ರಾಮದಲ್ಲಿ ಕ್ರೀಡಾಕೂಟದ ಕುರಿತು ಕಟು ಟೀಕೆ ಮಾಡಿದ್ದರು ಎಂಬ ಬಗ್ಗೆ ವರದಿಯಾಗಿತ್ತು. ಈ ಕುರಿತು ಸುದ್ದಿಗಾರರು ಅವರನ್ನು ಮರುಪ್ರಶ್ನೆ ಮಾಡಿದರು. ಆದರೆ, ತಾವು ಕ್ರೀಡಾಕೂಟದ ಕುರಿತು ಟೀಕೆ ಮಾಡಿರುವುದನ್ನು ಬೋಲ್ಟ್ ತಳ್ಳಿಹಾಕಿದ್ದಾರೆ. ಆರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಬೋಲ್ಟ್ ಗ್ಲಾಸ್ಗೋದಲ್ಲಿ 4 ್ಗ 100 ರಿಲೇ ವಿಭಾಗದ ಫೈನಲ್‌ನಲ್ಲಿ ಮಾತ್ರ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement