ಕ್ವಾರ್ಟರ್ಗೆ ಸಿಂಧು,ಕಶ್ಯಪ್, ಶ್ರೀಕಾಂತ್, ತುಳಸಿ
ಗ್ಲಾಸ್ಗೋ: ಭಾರತದ ಭರವಸೆಯ ಶಟ್ಲರ್ಗಳಾದ ಪಿ.ವಿ. ಸಿಂಧು, ಪಿ. ಕಶ್ಯಪ್, ಶ್ರೀಕಾಂತ್ ಕಿಡಂಬಿ ಮತ್ತು ಪಿ.ಸಿ. ತುಳಸಿ ಕಾಮನ್ವೆಲ್ತ್ ಗೇಮ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯ ತಮ್ಮ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪಿ. ಕಶ್ಯಪ್, 21-9, 21-5ರಿಂದ ಡಾಕೇಲ್ ಥೋರ್ಪ್ ಅವರನ್ನು ಸೋಲಿಸಿ ಮುನ್ನಡೆದರು. ಶ್ರೀಕಾಂತ್ ಕಿಡಂಬಿ, 21-8, 21-13ಅಂಕಗಳಿಂದ ವೇಲ್ಸ್ನ ಡ್ಯಾನಿಯಲ್ ಫಾಂಟ್ ಅವರನ್ನು ಪರಾಭವಗೊಳಿಸಿದರು.ಇಂದೇ ನಡೆದ ಮಹಿಳೆಯರ ವಿಭಾಗದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕಿತೆ ಸಿಂಧು 21-4, 21-6ರಿಂದ ದಕ್ಷಿಣ ಆಫ್ರಿಕಾದ ಸಾಂಡ್ರಾ ಲೀ ಗ್ರಾಂಗೆ ವಿರುದ್ಧ ಜಯಗಳಿಸಿದರು. ಅದೇ ರೀತಿ ಪಿ.ಸಿ. ತುಳಸಿ 21-10, 21-2 ಅಂಕಗಳಿಂದ ನಾರ್ದರ್ನ್ ಐರ್ಲೆಂಡ್ನ ಸಿನೇಡ ಚಾಂಬೇರ್ಸ್ಗೆ ಅವರಿಗೆ ಸೋಲುಣಿಸಿ ಎಂಟರಘಟ್ಟ ಪ್ರವೇಶಿಸಿದರು. ಕೇರಳದ ಹುಡುಗಿ 22ರ ತುಳಸಿ ಎರಡೂ ಗೇಮ್ಗಳಲ್ಲಿ ಉತ್ತಮ ಆಟ ಪ್ರದರ್ಶಿಸು ಮೂಲಕ ಕೇವಲ 24 ನಿಮಿಷಗಳ ಆಟದಲ್ಲಿಯೇ ಅಂತಿಮ ಗೆಲವು ದಾಖಲಿಸಿ ಮುಂದಡಿ ಇಟ್ಟರು.