ಜಡೇಜಾ ಪರ ಬಿಸಿಸಿಐ ಮೇಲ್ಮನವಿ
ಸೌಥಂಪ್ಟನ್: ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ಪ್ರಕರಣಕ್ಕೆ ಒಳಗಾಗಿದ್ದ ಜಡೇಜಾ ವಿರುದ್ಧ 1ನೇ ಸ್ತರದ ಆರೋಪ ಹೊರಿಸಿ ಪಂದ್ಯದ 50ರಷ್ಟು ದಂಡ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿಯನ್ನು ಸ್ವೀಕರಿಸಿರುವ ಐಸಿಸಿ, ಆಗಸ್ಟ್ 1ರಂದು ಈ ಕುರಿತು ವಿಚಾರಣೆ ನಡೆಸಲಿದೆ.