ಭಾರತಕ್ಕೆ ಮತ್ತೊಂದು ಪದಕ
ಗ್ಲಾಸ್ಗೋ: ನೈಜೀರಿಯಾದ ಮಹಿಳಾ ವೇಟ್‌ಲಿಫ್ಟರ್ ಚಿಕಾ ಅಮಲಾಹ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ ಆಕೆ ಗೆದ್ದಿದ್ದ ಚಿನ್ನದ ಪದಕವನ್ನು ಹಿಂಪಡೆಯಲಾಗಿದೆ. ಜು.25ರಂದು ನಡೆದ ಮಹಿಳೆಯರ 53 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿಕಾ ಚಿನ್ನದ ಪದಕ ಪಡೆದಿದ್ದರು. ಡೋಪಿಂಗ್‌ನಲ್ಲಿ ಸಿಕ್ಕ ಬಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅನರ್ಹಗೊಳಿಸಲಾಗಿದೆ. ಇದೇ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದ ಮತ್ಸಾ ಸಂತೋಷಿಗೆ ಈಗ ಬೆಳ್ಳಿ ಪದಕ ದೊರೆತರೆ, ನಾಲ್ಕನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ಸ್ವಾತಿ ಸಿಂಗ್‌ಗೆ ಕಂಚು ಲಭಿಸಿತು. ಈ ಮೂಲಕ ಭಾರತದ ಪಾಲಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.