ಸೋಲಿನತ್ತ ಭಾರತ ಮುಖ
ಆಂಗ್ಲರ ನಾಡಿನಲ್ಲಿ ಬೋನಿನೊಳಗೆ ಬಿದ್ದಿರುವ ಟೀಂ ಇಂಡಿಯಾ ಮೇಲೆದ್ದು ಬರಲು ದೊಡ್ಡ ಸಾಹಸವನ್ನೇ ಪ್ರದರ್ಶಿಸಬೇಕಾಗಿದೆ.
ಸೌಥಂಪ್ಟನ್: ಆಂಗ್ಲರ ನಾಡಿನಲ್ಲಿ ಬೋನಿನೊಳಗೆ ಬಿದ್ದಿರುವ ಟೀಂ ಇಂಡಿಯಾ ಮೇಲೆದ್ದು ಬರಲು ದೊಡ್ಡ ಸಾಹಸವನ್ನೇ ಪ್ರದರ್ಶಿಸಬೇಕಾಗಿದೆ. ಭಾರತದ ಮೇಲೆ ಫಾಲೋಆನ್ ಹೇರುವ ಅವಕಾಶವಿದ್ದರೂ, ಅದಕ್ಕೆ ಮನಸ್ಸು ಮಾಡದೇ ಕಠಿಣ ಲಕ್ಷ್ಯವನ್ನೇ ನಿಲ್ಲಿಸುವ ಗುರಿಯೊಂದಿಗೆ ಸಮರ್ಥ ಹೆಜ್ಜೆಗಳನ್ನಿಟ್ಟ ಇಂಗ್ಲೆಂಡ್ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಜಯದುಂದುಭಿ ಮೊಳಗಿಸಲು ತುದಿಗಾಲಲ್ಲಿ ನಿಂತಿದೆ.
ನಾಲ್ಕನೇ ಹಾಗೂ ಉಪಾಂತ್ಯ ದಿನವಾದ ಬುಧವಾರ ಭಾರತದ ಮೇಲೆ ಆಂಗ್ಲರು ಸಂಪೂರ್ಣ ತಮ್ಮ ಪಾರುಪತ್ಯ ಸ್ಥಾಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ 239 ರನ್‌ಗಳ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್ ಪಡೆ, ಭಾರತಕ್ಕೆ ಫಾಲೋ ಆನ್ ನೀಡಿ ಎರಡನೇ ಇನಿಂಗ್ಸ್ ಆರಂಭಿಸುವಂತೆ ಸೂಚಿಸಬಹುದಾಗಿತ್ತು. ಆದರೆ, ಇಂಗ್ಲೆಂಡ್ ತಾನೇ ದ್ವಿತೀಯ ಇನಿಂಗ್ಸ್ ಆರಂಭಿಸಿ 5.04ರ ಸರಾಸರಿಯಲ್ಲಿ ವೇಗವಾಗಿ ರನ್ ಕಲೆಹಾಕಿ 4 ವಿಕೆಟ್‌ಗೆ 205 ರನ್‌ಗಳಿಸಿದಾಗ ಡಿಕ್ಲೇರ್ ಘೋಷಿಸಿತು.
ಚಹಾ ವಿರಾಮಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ಗೆ ತೆರೆ ಎಳೆದುಕೊಂಡ ನಂತರ ಭಾರತದ ಮುಂದೆ 445 ರನ್‌ಗಳ ಬಂಡೆಯಾಕಾರದಂತಹ ಗುರಿ ನಿಂತಿತು. ಉತ್ತರವಾಗಿ ಭಾರತ ಆಟ ನಿಂತಾಗ ಎರಡನೇ ಇನಿಂಗ್ಸ್‌ನಲ್ಲಿ 112 ರನ್‌ಗಳ ಮೊತ್ತದಲ್ಲಿಯೇ 4 ವಿಕೆಟ್ ಒಪ್ಪಿಸಿ ದಯನೀಯ ಸೋಲಿನ ಭೀತಿಗೆ ಒಳಗಾಗಿದೆ. ಭಾರತ ಇನ್ನೂ 333 ರನ್‌ಗಳ ಹಿಂದಿದೆ. ಇದಕ್ಕೂ ಮುನ್ನ ಭಾರತ, ಮೂರನೇ ದಿನದ ಮೊತ್ತ 8 ವಿಕೆಟ್‌ಗೆ 323 ರನ್‌ಗಳೊಂದಿಗೆ ಉಪಾಂತ್ಯ ದಿನದಾಟ ಮುಂದುವರಿಸಿ ಮತ್ತೆ ಖಾತೆಗೆ ಕೇವಲ 7 ರನ್ ಸೇರಿಸುವಲ್ಲಿ ಉಳಿದ 2 ವಿಕೆಟ್ ಕಳೆದುಕೊಂಡಿತು. ಇಂದಿಗೆ ವಿಕೆಟ್ ಕಾಯ್ದಿರಿಸಿಕೊಂಡಿದ್ದ ನಾಯಕ ಧೋನಿ (50), ತಮ್ಮ ಖಾತೆಗೆ ಒಂದೂ ರನ್ ಸೇರಿಸದೇ ವಿಕೆಟ್ ಒಪ್ಪಿಸಿದರು. ಶಮಿ ಕೊನೆಯ ವಿಕೆಟ್ ಆಗಿ ಹೊರನಡೆಯುವುದರೊಂದಿಗೆ ಭಾರತ 330 ರನ್‌ಗಳ ಸಾಧಾರಣ ಮೊತ್ತಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಪತನವಾಯಿತು.
ಕುಕ್, ರೂಟ್ ಅರ್ಧಶತಕ: ಬೆಳಗಿನ 4.1 ಓವರುಗಳಲ್ಲಿಯೇ ಭಾರತದ ಇನಿಂಗ್ಸ್‌ಗೆ ಮಂಗಳ ಹಾಡಿ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಅಲಸ್ಟೇರ್ ಕುಕ್ (70) ಮತ್ತು ಜೋ ರೂಟ್ (56) ಅರ್ಧಶತಕ ಗಳಿಸಿಕೊಟ್ಟರು.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್ 569ಕ್ಕೆ7 (ಡಿಕ್ಲೇರ್)
ಭಾರತ ಮೊದಲನೇ ಇನಿಂಗ್ಸ್ 330ಕ್ಕೆ ಆಲೌಟ್
ಧೋನಿ ಸಿ ಬಟ್ಲರ್ ಬಿ ಆ್ಯಂಡರ್ಸನ್ 50, ಶಮಿ ಸಿ ಬಟ್ಲರ್ ಬಿ ಆ್ಯಂಡರ್ಸನ್ 5, ಪಂಕಜ್ ಸಿಂಗ್ ಅಜೇಯ 1, ಇತರೆ: (ಬೈ 16, ಲೆಗ್‌ಬೈ 14, ವೈಡ್ 8) ಒಟ್ಟು 38ವಿಕೆಟ್ ಪತನ: 1-17, 2-56, 3-88, 4-136, 5-210, 6-217, 7-275, 8-313, 9-329, 10-330
ಬೌಲಿಂಗ್ ವಿವರ: ಆ್ಯಂಡರ್ಸನ್ 26.1-10-53-5, ಬ್ರಾಡ್ 25-7-66-3, ಜೋರ್ಡನ್ 17-4-59-0, ವೋಕ್ಸ್ 20-8-60-0, ಅಲಿ 18-0-62-2
ಇಂಗ್ಲೆಂಡ್ 2ನೇ ಇನಿಂಗ್ಸ್ 4 ವಿಕೆಟ್‌ಗೆ 205 (ಡಿಕ್ಲೇರ್)
ರಾಬ್ಸನ್ ಸಿ ಧವನ್ ಬಿ ಭುವನೇಶ್ವರ್ 13, ಕುಕ್ ಅಜೇಯ 70, ಬ್ಯಾಲೆನ್ಸ್ ಸಿ ಪೂಜಾರ ಬಿ ಜಡೇಜಾ 38, ಬೆಲ್ ಬಿ ಜಡೇಜಾ 23, ರೂಟ್ ಬಿ ಜಡೇಜಾ 56, ಇತರೆ: (ಬೈ 4, ವೈಡ್ 1) ಒಟ್ಟು 5
ವಿಕೆಟ್ ಪತನ: 1-22, 2-80, 3-106 , 4-205
ಬೌಲಿಂಗ್ ವಿವರ: ಭುವನೇಶ್ವರ್ 10-0-59-1, ಪಂಕಜ್ 10-4-33-0, ಶಮಿ 4-0-24-0, ರೋಹಿತ್ 5-0-32-0, ಜಡೇಜಾ 10.4-1-52-3, ವಿಜಯ್ 1-0-1-0.
ಭಾರತ ಎರಡನೇ ಇನಿಂಗ್ಸ್ 4 ವಿಕೆಟ್‌ಗೆ 112
ವಿಜಯ್ ರನೌಟ್ 12, ಧವನ್ ಸಿ ಜೋರ್ಡಾನ್ ಬಿ ರೂಟ್ 37, ಪೂಜಾರ ಸಿ ಜೋರ್ಡಾನ್ ಬಿ ಅಲಿ 2, ಕೊಹ್ಲಿ ಸಿ ಬಟ್ಲರ್ ಬಿ ಅಲಿ 28, ರಹಾನೆ ಬ್ಯಾಟಿಂಗ್ 18, ರೋಹಿತ್ ಬ್ಯಾಟಿಂಗ್ 6. ಇತರೆ: (ಬೈ-4, ಲೆಗ್‌ಬೈ-5) 9.
ವಿಕೆಟ್ ಪತನ: 1-26, 2-29, 3-80, 4-89.
ಬೌಲಿಂಗ್ ವಿವರ: ಆ್ಯಂಡರ್ಸನ್ 8-3-13-0, ಬ್ರಾಡ್ 9-4-18-0, ವೋಕ್ಸ್ 5-2-7-0, ಅಲಿ 12-2-33-2, ಜೋರ್ಡಾನ್ 5-0-22-0, ರೂಟ್ 2-0-5-1, ಬ್ಯಾಲೆನ್ಸ್ 1-0-5-0.