ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಉರುಗ್ವೆ ತಂಡದಲ್ಲಿ ಸೂರೆಜ್

Srinivasa Murthy VN
Updated On : 2 Jun 2014, 1:09 am

ರಿಯೊ ಡೀ ಜನೈರೊ: ಲಿವರ್‌ಪೂಲ್‌ನ ಮುನ್ಪಡೆ ಆಟಗಾರ ಲೂಯಿಸ್ ಸೂರೆಜ್ ಕೊನೆಗೂ 23 ಸದಸ್ಯರ ಉರುಗ್ವೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತರಬೇತಿಯ ವೇಳೆ ಗಂಭೀರ ಎಡಮಂಡಿ ನೋವಿಗೆ ತುತ್ತಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಸೂರೆಜ್ ಸದ್ಯ ಪುನರ್‌ನಿರ್ಮಾಣ ಶಿಬಿರದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಅವರು ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಆದರೆ, ಕೋಚ್ ಆಸ್ಕರ್ ಟಾಬರೆಜ್, ಈ ಪ್ರಮುಖ ಆಟಗಾರನ ಮೇಲೆ ನಂಬಿಕೆ ಇಟ್ಟು ಸ್ಥಾನ ಕಲ್ಪಿಸಿದ್ದಾರೆ. ಇಂಗ್ಲೀಷ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶ ನೀಡಿದ್ದ ಅವರು ಎಲ್ಲರ ಕೇಂದ್ರಬಿಂದುವಾಗಿದ್ದರು. ಈಗ ಉರುಗ್ವೆ ತಂಡ ಸೇರಿಕೊಂಡಿದ್ದು ಅದರ ಶಕ್ತಿ ಮತ್ತಷ್ಟು ಹೆಚ್ಚಿದಂತಾಗಿದೆ.
ತಂಡ: ಗೋಲ್‌ಕೀಪರ್: ಫರ್ನಾಂಡೊ ಮುಸ್ಲೇರಾ, ಮಾರ್ಟಿನ್ ಸಿಲ್ವಾ, ರೋಡ್ರಿಗೊ ಮುನೋಜ್. ರಕ್ಷಣೆ- ಮ್ಯಾಕ್ಸಿಮಿಲಿಯಾನೊ ಪೆರೇರಾ, ಡೀಗೊ ಲುಗಾನೊ, ಡೀಗೊ ಗಾಡಿನ್, ಜೋಸ್ ಮಾರಿಯಾ ಗೋಮೆನೆಜ್, ಸೆಬಾಸ್ಟಿಯನ್ ಕೋಟ್ಸ್, ಮಾರ್ಟಿನ್ ಕಸೆರ್ಸ್, ಜಾರ್ಜ್ ಫುಕಿಲ್. ಸಂಪರ್ಕ- ಅಲ್ವಾರೊ ಗೋಂಜಾಲೆಜ್, ಅಲ್ವಾರೊ ಪೆರೇರಾ, ವಾಲ್ಟರ್ ಗರ್ಗಾನೊ, ಎಗಿಡಿಯೊ ಅರೆವಲೊ ರಿಯೋಸ್, ಡೀಗೊ ಪೆರೆಜ್, ಕ್ರಿಸ್ಟಿಯನ್ ರೋಡ್ರಿಗ್, ಗ್ಯಾಸ್ಟನ್ ರಾಮಿರೆಜ್, ನಿಕೋಲಸ್ ಲೊಡೇರೊ. ಮುನ್ಪಡೆ- ಲೂಯಿಸ್ ಸೂರೆಜ್, ಎಡಿನ್ಸನ್ ಕವಾನಿ, ಅಬೆಲ್ ಹೆರ್ನಾಂಡೆಜ್, ಡೀಗೊ ಫೋರ್ಲಾನ್, ಕ್ರಿಸ್ಟಿಯನ್ ಸ್ಟುವಾನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement