ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಭಿಮಾನಿಗಳ ಆಯ್ಕೆ ಮೇರೆಗೆ ಚೆಂಡಿನ ಹೆಸರು

Srinivasa Murthy VN
Updated On : 3 Jun 2014, 1:26 am

ಈ ಬಾರಿ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಳಸಲಾಗುವ ಚೆಂಡಿಗೆ ಬ್ರಾಜುಕಾ ಎಂದು ಹೆಸರಾಡಲಾಗಿದ್ದು, ಇದೇ ಮೊದಲ ಬಾರಿಗೆ ಫುಟ್ಬಾಲ್ ಅಭಿಮಾನಿಗಳ ಮತಗಳ ಮೂಲಕ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಹೆಸರಿಗೆ 10 ಲಕ್ಷ ಅಭಿಮಾನಿಗಳು ಮತ ಹಾಕಿದ್ದು, ಬ್ರಾಜುಕಾ ಎಂದರೆ ಬ್ರೆಜಿಲಿಯನ್ನರ ಜೀವನ ಶೈಲಿ ಎಂದರ್ಥ. ಫಿಫಾದ ತಾಂತ್ರಿಕ ಸಮಿತಿ ಈ ವಿಧಾನಕ್ಕೆ ಮುಂದಾಗಿದ್ದು, ಅಭಿಮಾನಿಗಳು ಇದರಲ್ಲಿ ಭಾಗವಹಿಸುವ ಮೂಲಕ ಪಂದ್ಯಾವಳಿಗೆ ಪ್ರಚಾರ ನೀಡಲಾಯಿತು. ಅಲ್ಲದೆ ಚೆಂಡಿನಲ್ಲಿ 6 ಎಚ್‌ಡಿ ಕ್ಯಾಮೆರಾ ಅಳವಡಿಸಲಾಗಿದೆ.

ಆಟಗಾರ ಬಳಸುವ ಶೂ
ಫಿಫಾ ತಾಂತ್ರಿಕ ಸಮಿತಿ ಆಟಗಾರರು ಬಳಸುವ ಶೂ ಬಗ್ಗೆಯೂ ವಿಶೇಷ ಗಮನ ಹರಿಸಿದ್ದು, ಆಟಗಾರರು ಚೆಂಡನ್ನು ಒದೆಯುವಾಗ ಉತ್ತಮ ಕಮ್‌ಫರ್ಟ್ ನೀಡಲು ನೆರವಾಗುವಂತೆ ಮಾಡಲಾಗಿದೆ. ಅಲ್ಲದೆ ಕಾಲಿನ ಆಕಾರದಲ್ಲಿ ಹಿಮ್ಮಡಿಗೆ ಹೆಚ್ಚು ತೊಂದರೆಯಾಗದಂತೆ ವಿನ್ಯಾಸ ಮಾಡಲಾಗಿದೆ. ಈ ಬಾರಿ ವಿಭಿನ್ನ ಮಾದರಿಯ ಶೂಗಳನ್ನು ಪರಿಚಯಿಸಿರುವುದು, ವಿಶ್ವಕಪ್‌ನ ವಿಶೇಷಗಳಲ್ಲೊಂದು. ನೈಕಿ ಕಂಪನಿ ಮ್ಯಾಜಿಸ್‌ಟಾ ಎಂಬ ಶೂ ತಯಾರಿಸಿದರೆ, ಅಡಿಡಾಸ್ ಮೆಸ್ಸಿ ಪ್ಲೇಯಿಂಗ್ ಸ್ಟೈಲ್ ಹಾಗೂ ಆಲ್ ಇನ್‌ಒನ್ ನಿಟ್ಟೆಡ್ ಶೂ ಎಂಬ ಎರಡು ಮಾದರಿಯನ್ನು ಬಿಡುಗಡೆ ಮಾಡಿದೆ.

ಆಟಗಾರರ ಜೆರ್ಸಿ
ಇತ್ತೀಚಿನ ದಿನಗಳಲ್ಲಿ ಆಟಗಾರರು ಸಾಮಾನ್ಯ ಜೆರ್ಸಿಗಳನ್ನು ಬಳಸುವುದಿಲ್ಲ. ಅದರ ಗುಣಮಟ್ಟ ವಿಭಿನ್ನವಾಗಿದೆ. ಈ ಬಾರಿಯ ಜೆರ್ಸಿಯನ್ನು ಹೊಸ ತಂತ್ರಜ್ಞಾನದಲ್ಲಿ ತಯಾರಿಸಲಾಗಿದ್ದು, ಆಟಗಾರರಿಗೆ ಅನುಕೂಲ ಮಾಡಿಕೊಡಲಿದೆ. ಇಟಲಿಯ ಜೆರ್ಸಿ ಮಸಾಜ್ ಸ್ಟ್ರಿಪ್ ಒಳಗೊಂಡಿದ್ದು, ಆಟಗಾರರು ಓಡುವಾಗ ಅವರ ಸ್ನಾಯುಗಳಿಗೆ ತೊಂದರೆಯಾಗುವುದಿಲ್ಲ. ಆಟಗಾರರಿಗೆ ನೀಡಲಾಗುವ ಮ್ಯಾಚ್ ಕಿಟ್ ಅನ್ನು ಪ್ಲಾಸ್ಟಿಕ್ ಬಾಟೆಲ್‌ಗಳನ್ನು ರಿಸೈಕಲ್ ಮಾಡಿ ತಯಾರಿಸಲಾಗಿದ್ದು, ಇದರಲ್ಲಿ ಡ್ರೈಫಿಟ್ ತಂತ್ರಜ್ಞಾನ, ಮೆಷ್ ಪ್ಯಾನಲ್ ಸೇರಿದಂತೆ ಇತರೆ ಅನುಕೂಲ ಹೊಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement