ಕಾಫಿ ನಾಡಲ್ಲಿ ಫುಟ್ಬಾಲ್ ಘಮ
ಜಾಗತಿಕ ಫುಟ್ಬಾಲ್ ಕ್ಷೇತ್ರದಲ್ಲಿ ಮತ್ತೊಂದು ಹೊಸ ಶಕೆ ಉದಯವಾಗಲು ಕ್ಷಣಗಣನೆ ಆರಂಭವಾಗಿದೆ.
ಜಾಗತಿಕ ಫುಟ್ಬಾಲ್ ಕ್ಷೇತ್ರದಲ್ಲಿ ಮತ್ತೊಂದು ಹೊಸ ಶಕೆ ಉದಯವಾಗಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಬ್ರೆಜಿಲ್‌ನಲ್ಲಿ ಈ ಹೊಸ ಅಧ್ಯಾಯ ರಚನೆಯಾಗಲಿದೆ. 2014ರ ಜೂನ್ 12ರಿಂದ ಜುಲೈ 13ರ ವರೆಗೆ ನಡೆಯಲಿರುವ ಈ ಫುಟ್ಬಾಲ್ ಜಾತ್ರೆಯ ಮೇಲೆ ಜಗತ್ತಿನ ದೃಷ್ಟಿ ನೆಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜಗತ್ತಿನ 32 ಶ್ರೇಷ್ಠ ತಂಡಗಳು ಯುದ್ಧಭೂಮಿಯಲ್ಲಿ ಶಸ್ತ್ರಸಜ್ಜಿತವಾಗಿ ನಿಂತಿವೆ. ತಲಾ 4 ರಂತೆ ಒಟ್ಟು 8 ಗುಂಪುಗಳಲ್ಲಿ ತಂಡಗಳನ್ನು ವಿಭಜಿಸಲಾಗಿದೆ. ಪ್ರತಿ ದಿನಕ್ಕೆ ಒಂದರಂತೆ ಪ್ರತಿಯೊಂದು ಗುಂಪಿನ ವಿಶ್ಲೇಷಣೆ ಮಾಡುವ ಪ್ರಯತ್ನ ನಮ್ಮದು. ಮೊದಲಿಗೆ ಎ ಗುಂಪಿನ ಅವಲೋಕನ ಇಲ್ಲಿದೆ.
ಎ ಗುಂಪಿನಲ್ಲಿ ಬ್ರೆಜಿಲ್ ಫೇವರಿಟ್
ಫುಟ್ಬಾಲ್ ವಿಶ್ವಕಪ್ ಜ್ವರ ಮತ್ತೆ ಶುರುವಾಗಿದೆ. ಪಂದ್ಯಾವಳಿ ಆತಿಥ್ಯ ವಹಿಸಿರುವ ಬ್ರೆಜಿಲ್ ಮತ್ತೊಮ್ಮೆ ಇಲ್ಲಿ ಹಾಟ್ ಫೇವರಿಟ್. ಈ ಬಾರಿ ಬ್ರೆಜಿಲ್ 'ಎ' ಗುಂಪಿನಲ್ಲಿ ಕ್ರೊವೇಷಿಯಾ, ಮೆಕ್ಸಿಕೊ ಹಾಗೂ ಕೆಮರೂನ್ ಜೊತೆ ಸ್ಥಾನ ಹೊಂದಿದೆ. ಈಗಾಗಲೇ ಜಾಗತಿಕ ಫುಟ್ಬಾಲ್‌ನಲ್ಲಿ ಈ ಮೂರು ತಂಡಗಳ ಜತೆ ತನ್ನ ಪಾರುಪತ್ಯ ಮೆರೆದಿರುವ ಬ್ರೆಜಿಲ್, ಎ ಗುಂಪಿನಲ್ಲಿ ಅಗ್ರ ತಂಡವಾಗಿ ಹೊರಹೊಮ್ಮುವುದು ಬಹುತೇಕ ನಿರೀಕ್ಷೆ. ಹಾಗಾಗಿ ಎರಡನೇ ಸ್ಥಾನಕ್ಕೆ ಮಾತ್ರ ಮೂರು ತಂಡಗಳ ಮಧ್ಯೆ ಬಲಿಷ್ಠ ಕಾಳಗ ನಡೆಯುವ ಸಾಧ್ಯತೆ ಇದೆ.
ಬ್ರೆಜಿಲ್
ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ
ಸ್ಟಾರ್ ಆಟಗಾರ
ನೇಮಾರ್
- 1958, 1962, 1970, 1994, 2002ರಲ್ಲಿ ಚಾಂಪಿಯನ್.
-ಕಳೆದ ಬೇಸಿಗೆಯಲ್ಲಿ ನಡೆದ ಕಾನ್ಫೆಡರೇಷನ್ ಕಪ್‌ನಲ್ಲಿ ಸಾಧಿಸಿದ ಯಶಸ್ಸು ಬ್ರೆಜಿಲ್ ಬೆನ್ನಿಗಿದೆ.
-ವಿಶ್ವಕಪ್ ಇತಿಹಾಸದಲ್ಲಿ 5 ಬಾರಿ ಗೆದ್ದಿರುವ ಆತಿಥೇಯ ತಂಡ 6ನೇ ಬಾರಿ ಗೆಲ್ಲಲು ಎದುರು ನೋಡುತ್ತಿದೆ.
- ಕೋಚ್ ಸ್ಕೊಲಾರಿ 2002ರಲ್ಲಿ ತಂಡದ ಕೋಚ್ ಆಗಿದ್ದಾಗ ಜಯ ಕಂಡಿತ್ತು. ಈಗ ಸಹ ಅವರ ಗರಡಿಯಲ್ಲೇ ತಂಡ ಪಳಗಿದೆ.
- ಬಾರ್ಸಿಲೋನಾ ಮುನ್ನಡೆ ಆಟಗಾರ ನೇಮಾರ್ ತಂಡದಲ್ಲಿ ಮಿಂಚಿದರೆ, ಬ್ರೆಜಿಲ್ ತವರಿನಲ್ಲೇ ಮತ್ತೊಂದು ಟ್ರೋಫಿ ಎತ್ತಿ ಹಿಡಿಯುವ ಸಾಧ್ಯತೆಗಳಿವೆ.
ಬ್ರೆಜಿಲ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ
ಅರ್ಜೆಂಟೀನಾ ತಂಡ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸ ತಮಗಿದೆ. ಕೋಚ್ ಅಲೆಜಾಂಡ್ರೊ ಸಬೆಲ್ಲಾ ಮೇಲೆ ತಮಗೆ ಪೂರ್ಣ ನಂಬಿಕೆ ಇದೆ. ಮೇಲಾಗಿ
ತಂಡದ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಗಾಗಿ, ಅರ್ಜೆಂಟೀನಾ ಪ್ರಶಸ್ತಿ ಗೆದ್ದುಕೊಂಡು ಬರಲಿದೆ. ಆ ಮೂಲಕ ಮತ್ತೊಮ್ಮೆ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ನಮ್ಮ ಕನಸು ನನಸಾಗಲಿದೆ.
-ಡೀಗೊ ಮರಡೋನಾ, ಅರ್ಜೆಂಟೀನಾದ ಮಾಜಿ ಕೋಚ್, ಆಟಗಾರ
ಕೆಮರೂನ್
ಕೋಚ್: ವೋಲ್ಕರ್ ಫಿಂಕೆ
ಸ್ಟಾರ್ ಆಟಗಾರ: ಸ್ಯಾಮುಯಲ್ ಎಟೂ
ಶ್ರೇಷ್ಠ ಪ್ರದರ್ಶನ: ಟ 1990ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ.
- ಕೆಮರೂನ್ ಪಂದ್ಯಾವಳಿಯಲ್ಲಿ ಶ್ರೇಷ್ಠ ಪೈಪೋಟಿಯನ್ನು ನೀಡಲು ಎದುರು ನೋಡುತ್ತಿದೆ.
-1990ರಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅದು ಸ್ಪರ್ಧಾತ್ಮಕ ಪ್ರದರ್ಶನ ನೀಡತೊಡಗಿದೆ.
-ಸ್ಯಾಮುಯಲ್ ಎಟೂ ತಂಡದ ಅತ್ಯುತ್ತಮ ಆಟಗಾರನಾಗಿದ್ದು, ತಂಡಕ್ಕೆ ಆಸರೆಯಾಗುವ ಆಟಗಾರ ಎನಿಸಿದ್ದಾರೆ.
-ಸ್ಟಿಫೆನ್ ಎಂಬಿಯಾ, ಅಲೆಕ್ಸ್ ಸಾಂಗ್ ಹಾಗೂ ಜೀನ್ ಮಾಕೌನ್ ಸಹ ತಂಡದ ಪರ ಮಹತ್ವದ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.
ಕ್ರೊವೇಷಿಯಾ
ಕೋಚ್: ನಿಕೊ ಕೊವಾಕ್
ಸ್ಟಾರ್ ಆಟಗಾರ: ಮಾರಿಯೋ ಮಂಡ್ಜುಕಿಕ್
ಶ್ರೇಷ್ಠ ಪ್ರದರ್ಶನ: 1998ರಲ್ಲಿ 3ನೇ ಸ್ಥಾನ
-ವಿಶ್ವದ ಬಲಿಷ್ಠ ತಂಡಗಳಿಗೆ ಕ್ರೊವೇಷಿಯಾ ಸಾಟಿಯಾಗದಿರಬಹುದು.
-ಆದರೆ, ಬೇರ್ನ್ ಮ್ಯೂನಿಚ್‌ನ ಮಾರಿಯೋ ಮಡ್ಜಿಕಿಕ್ ಹಾಗೂ ರಿಯಲ್ ಮ್ಯಾಡ್ರಿಡ್‌ನ ಲ್ಯೂಕಾ ಮಾಡ್ರಿಕ್ ಅವರಂತಹ ಆಟಗಾರರು ಇರುವುದು ತಂಡ ಗುಣಮಟ್ಟದ ಹೋರಾಟ ನಡೆಸಲು ಸಾಕಾಗುತ್ತದೆ.
-ನಿಕೊ ಕ್ರಂಜಕಾರ್, ಎಡುರ್ಡೋ ಮತ್ತು ನಿಕಿಕಾ ಜೆಲಾವಿಚ್ ಅವರು ಸಹ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ.
ಮೆಕ್ಸಿಕೊ
ಕೋಚ್: ಮಿಗ್ಯೂಲ್ ಹೆರೆರಾ
ಸ್ಟಾರ್ ಆಟಗಾರ: ಜಾವೀರ್ ಹೆರ್ನಾಂಡೆಜ್
ಶ್ರೇಷ್ಠ ಪ್ರದರ್ಶನ
-1970 ಮತ್ತು 1986ರಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶ.
- ವಿಶ್ವಕಪ್‌ಗೆ ಅರ್ಹತೆ ಪಡೆಯಲು ಬ್ರೆಜಿಲ್ ಖಂಡಾಂತರ ಪ್ಲೇ-ಆಫ್‌ನಲ್ಲಿ ಜಯ ಸಾಧಿಸಬೇಕಾಗಿತ್ತು.
-ಆಗ ಅಲ್ಲಿ ನ್ಯೂಜಿಲೆಂಡ್ ವಿರುದ್ಧ 9-3 ಗೋಲುಗಳಿಂದ ಜಯ ಸಾಧಿಸಿದ್ದ ಮೆಕ್ಸಿಕೋ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.
-ತಂಡ ಹಿರಿಯ ಮತ್ತು ಯುವ ಆಟಗಾರರ ಸಮ್ಮಿಶ್ರಣವನ್ನು ಹೊಂದಿದೆ.
- ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಹೆರ್ನಾಂಡೆಜ್ ತಂಡದ ಅಪಾಯಕಾರಿ ಆಟಗಾರ ಎನಿಸಿದ್ದಾರೆ.