ಗೋಲ್ ಲೈನ್ ಟೆಕ್ನಾಲಜಿ
ಈ ಟೆಕ್ನಾಲಜಿ ಮೂಲಕ ಮೈದಾನದ ಪ್ರತಿ ಗೋಲಿನ ಮೇಲೆ 7 ಕ್ಯಾಮೆರಾ ಕಣ್ಣಿರಿಸಲಾಗಿದೆ. ಅಲ್ಲದೆ ಈ ಕ್ಯಾಮೆರಾಗಳು ಪ್ರತಿ ಸೆಕೆಂಡ್ಗೆ 500 ಫ್ರೇಮ್ಗಳನ್ನು ಸೆರೆಹಿಡಿಯಲಿದೆ. ಇದನ್ನು 15 ಕಂಪ್ಯೂಟರ್ಗಳಿಗೆ ರವಾನಿಸಲಿದೆ. ನಂತರ ರೆಫ್ರಿಗಳಿಗೆ ಪುಟ್ಟ ಎಲೆಕ್ಟ್ರಾನಿಕ್ ಸಾಧನ ನೀಡಲಾಗಿದ್ದು, ಈ ಕ್ಯಾಮೆರಾಗಳಿಂದ ಸೆರೆಹಿಡಿದ ನಂತರ ಚೆಂಡು ಗೋಲಿನ ಗೆರೆ ದಾಟಿದೆಯೇ ಎಂಬ ಅಂಶವನ್ನು ಈ ಸಾಧನಕ್ಕೆ ರವಾನಿಸಲಾಗುವುದು. ಈ ಮೂಲಕ ಇಷ್ಟು ದಿನಗಳಕಾಲ ವಿವಾದಕ್ಕೆ ಕಾರಣವಾಗುತ್ತಿದ್ದ ಸಮಸ್ಯೆ ಬಗೆಹರಿಯುವ ವಿಶ್ವಾಸ ಮೂಡಿಸಿದೆ.
ಚೆಂಡಿನ ತಂತ್ರಜ್ಞಾನ
ಹಿಂದಿನ ಕಾಲದಲ್ಲಿ ಫುಟ್ಬಾಲ್ ಕಪ್ಪು ಹಾಗೂ ಬಿಳಿಯಾಗಿತ್ತು. ಆದರೆ ಸಮಯ ಬದಲಾದಂತೆ ಚೆಂಡಿನ ರೂಪವೂ ಬದಲಾಗಿದೆ. ಪ್ರತಿ ವಿಶ್ವಕಪ್ಗೂ ಹೊಸ ಹೊಸ ತಂತ್ರಜ್ಞಾನ ಬಳಸಿ ಚೆಂಡನ್ನು ತಯಾರಿಸುತ್ತಿದ್ದು, 1986 ವಿಶ್ವಕಪ್ನಲ್ಲಿ ಕಡೇಯ ಬಾರಿಗೆ ಚರ್ಮದಿಂದ ಮಾಡಿದ ಚೆಡನ್ನು ಬಳಸಲಾಯಿತು. ನಂತರ ಪಾಲಿತೆರಿನ್ನ ಚೆಂಡನ್ನು ಬಳಸಲಾಗುತ್ತಿದ್ದು, ಗಾತ್ರಾ ಹಾಗೂ ತೂಕದಲ್ಲೂ ಪ್ರಯೋಗಗಳಾಗಿವೆ. ಈ ಬಾರಿ ಬಳಸಲಾಗುವ ಬ್ರಾಜುಕಾ ಚೆಂಡನ್ನು, ಕನಿಷ್ಠ ನೀರು ಹೀರುವಂತೆ ನಿರ್ಮಿಸಿದ್ದು, ಮಳೆ ಬಂದರೂ ಆಟಗಾರರು ಚೆಂಡಿನ ಚಲನೆಯನ್ನು ನಿರ್ದಿಷ್ಟವಾಗಿ ಊಹಿಸಲು ನೆರವಾಗುತ್ತದೆ.
ಗೆರೆ ಎಳೆಯಲು ಸ್ಪ್ರೆ
ಫುಟ್ಬಾಲ್ ರೆಫ್ರಿಗಳು ಇನ್ನು ಮುಂದೆ ಪಂದ್ಯದ ವೇಳೆ ಗೋಲು ಲೈನ್ ಟೆಕ್ನಾಲಜಿ ಮಷಿನ್ ಜತೆಗೆ, ಸ್ಪ್ರೇ ಬಾಟೆಲ್ ಅನ್ನು ಹೊಂದಿರುತ್ತಾರೆ. ಫ್ರೀ ಕಿಕ್ ಸಮಯದಲ್ಲಿ ಎದುರಾಳಿ ತಂಡದ ಆಟಗಾರರು ಗೋಲಿನಿಂದ 10 ಗಜ ದೂರವಿರಬೇಕಿದ್ದು, ಈ ಅಂತರವನ್ನು ದಾಟದಂತೆ ಹಾಗೂ ತಮ್ಮ ಸ್ಥಳವನ್ನು ಮೀರದಂತೆ ಗೇರೆ ಎಳೆಯಲು ರೆಫ್ರಿಗಳು ಇನ್ನು ಮುಂದೆ ಸ್ಪ್ರೇ ಬಳಸಲಿದ್ದಾರೆ. ಈ ಸ್ಪ್ರೇ ಕೆಲವು ನಿಮಿಷಗಳಲ್ಲಿ ಕಣ್ಮರೆಯಾಗಲಿದ್ದು, ಪರಿಸರ ಸ್ನೇಹಿಯಾಗಿದೆ.