ಜು.26ರಿಂದ ಕಿರಿಯರ ಫುಟ್ಬಾಲ್ ಪಂದ್ಯಾವಳಿ
ಬೆಂಗಳೂರು: ನಗರದ ಡೆನ್ಝ್ಪ್ರತಿಷ್ಠಾನ ಹದಿನಾಲ್ಕು ವರ್ಷ ಕೆಳಗಿನವರಿಗೆ ಫುಟ್ಬಾಲ್ ಪಂದ್ಯಾವಳಿ ಅಯೋಜಿಸಿದೆ. ದೇಶದೆಲ್ಲೆಡೆಯಿಂದ 64 ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು ಆಸಕ್ತರು 3500 ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರತಿಷ್ಠಾನ ಅಧ್ಯಕ್ಷ ಡೆನ್ಜಿಲ್ ಫರ್ನಾಂಡಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜುಲೈ 26 ಮತ್ತು 27ರಂದು ಪಂದ್ಯಾವಳಿ ನಡೆಯಲಿದ್ದು ವಿಜೇತ ತಂಡಕ್ಕೆ 1 ಲಕ್ಷ ನಗದು ಮತ್ತು ಪ್ರಶಸ್ತಿ ಪದಕ ನೀಡಲಾಗುತ್ತದೆ. 2017ರಲ್ಲಿ ನಡೆಯುವ ಹದಿನೇಳು ವರ್ಷದೊಳಗಿನ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಭಾರತಕ್ಕೆ ಸಮರ್ಥ ಆಟಗಾರರನ್ನು ಅನ್ವೇಷಣೆ ಮಾಡುವ ಉದ್ದೇಶದಿಂದ ಪಂದ್ಯ ಆಯೋಜಿಸಲಾಗಿದೆ ಎಂದರು ಹೇಳಿದರು. ಮಾಹಿತಿಗೆ: 7760592144 ಸಂಪರ್ಕಿಸಿ.