ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾ ಸ್ಕ್ವಾಷ್: ಭಾರತಕ್ಕೆ ಜಯ

Srinivasa Murthy VN
Updated On : 12 Jun 2014, 1:05 am

ಹಾಂಕಾಂಗ್: ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಪುರುಷರ ಮತ್ತು ವನಿತೆಯರ ಸ್ಕ್ವಾಷ್ ತಂಡಗಳು ಏಷ್ಯನ್ ಚಾಂಪಿಯನ್‌ಶಿಪ್‌ನ ಮೊದಲ ದಿನ ಇರಾನ್ ವಿರುದ್ಧವೇ ಜಯ ಕಂಡುಕೊಂಡವು.      ಪುರುಷರ ತಂಡ ಈ ಪಂದ್ಯದಲ್ಲಿ 3-0 ಅಂತರದಿಂದ ಜಯ ಸಾಧಿಸಿದರೆ, ಮಹಿಳೆಯರೂ ಸಹ ಇಷ್ಟೇ ಅಂತರದಲ್ಲಿ ಗೆಲವು ದಾಖಲಿಸಿ ಶುಭಾರಂಭ ಮಾಡಿದರು.   ಏಷ್ಯಾದ ನಂಬರ್ 1 ಆಟಗಾರ ಸೌರವ್ ಘೋಸಾಲ್, ಹರಿಂದರ್ ಪಾಲ್ ಸಂಧು ಹಾಗೂ ಮಹೇಶ್ ಮಂಗಾವ್ಕರ್ ಅವರು ಪುರುಷರ ತಂಡದಲ್ಲಿ ಆಡಿ ಜಯ ಸಂಪಾದಿಸಿದರು. ವಿಶ್ವದ ನಂಬರ್ 10 ರ್ಯಾಂಕಿಂಗ್ ಆಟಗಾರ್ತಿ ದೀಪಿಕಾ ಪಳ್ಳಿಕಾಲ್, ಜೋಶ್ನಾ ಚಿನ್ನಪ್ಪ ಹಾಗೂ ಅನಕಾ ಅಲಂಕಾಮೋನಿ ಅವರು ಇರಾನ್ ವನಿತೆಯರ ವಿರುದ್ಧ ಮೇಲುಗೈ ಸಾಧಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement