ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶ್ರವಣ್‌ಗೆ ಬೆಳ್ಳಿ

Srinivasa Murthy VN
Updated On : 14 Jun 2014, 12:00 pm

ತೈಪೇ ಸಿಟಿ: ಹರಿಯಾಣದ ಶ್ರವಣ್ ಖರಬ್ ಅವರು ತೈಪೇ ಮುನಿಷಿಪಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಭಾರತದ ಓಟಗಾರ ಶ್ರವಣ್ ಅವರು 31.52.37 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಎರಡನೇ ಸ್ಥಾನದ ಗೌರವ ಪಡೆದರು. ಆದರೆ ಭಾರತೀಯ ಓಟಗಾರನಿಗೆ ತಮ್ಮ ಶ್ರೇಷ್ಠ ಸಾಧನೆಯಾದ 28:55.31 ಸೆಕೆಂಡುಗಳ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಚಿನ್ನದ ಪದಕ ಗೆದ್ದುಕೊಂಡ ಜಪಾನ್ ಓಟಗಾರ ಹಜುಮಾ ಹಟೋರಿ ಅವರು 31:10.60 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಮೊದಲ ಸ್ಥಾನ ಪಡೆದರು. ಯೆಮನ್‌ನ ಯಾಸಿರ್ ಸಲೇಮ್ ಬಾಘರಬ್ 32:22.42 ಸೆ.ಗಳೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇಂದೇ ನಡೆದ ಸ್ಪರ್ಧೆಗಳಲ್ಲಿ ಹರಿಯಾಣದ ಬಾಲಕಿ ಪಿಂಕಿ ಕುಮಾರಿ ಅವರು ಮಹಿಳೆಯರ 1,500 ಮೀ. ಓಟದಲ್ಲಿ 4:37.53 ಸೆಕೆಂಡುಗಳಲ್ಲಿ ತಲುಪಿ ಐದನೇ ಸ್ಥಾನಕ್ಕೆ ತೃಪ್ತಿ ಹೊಂದಿದರು. ಅವರು ತಮ್ಮ ಜೂನಿಯರ್ ರಾಷ್ಟ್ರೀಯ ದಾಖಲೆಗಿಂತಲೂ (4:27.26ಸೆ.) ಹಿಂದುಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement