ಒಂದೆಡೆ ಸಂಭ್ರಮ ಇನ್ನೊಂದೆಡೆ ದುಃಖ!
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೆಲ್ಲುವ ಫೇವರಿಟ್ ಎಂದೇ ಬಿಂಬಿತವಾಗಿರುವ ಸ್ಪೇನ್ ತಂಡ ಲೀಗ್ ಹಂತದ ತನ್ನ ಮೊದಲ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ ಸೋತಾಗ ಉಭಯ ತಂಡಗಳ ಅಭಿಮಾನಿಗಳಲ್ಲಿ ಕಂಡು ವಿಭಿನ್ನ ಪ್ರತಿಕ್ರಿಯೆ ಹೀಗಿತ್ತು.
ಕಾರಣ ಹಾಲಿ ಚಾಂಪಿಯನ್ ಆಗಿರುವ ಸ್ಪೇನ್ ಮೇಲೆ ಭಾರೀ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ಅದು 5-1 ಗೋಲುಗಳ ಅಂತರದಿಂದ ಸೋಲನುಭವಿಸಿದ್ದು ತಂಡದ ಅಭಿಮಾನಿಗಳು ದುಃಖದಲ್ಲಿ ಮುಳುಗುವಂತೆ ಮಾಡಿತು. ಇನ್ನು ಸ್ಪೇನ್ನಂತಹ ತಂಡದ ವಿರುದ್ಧ ಹೆಚ್ಚಿನ ಅಂತರದಿಂದ ಹಾಲೆಂಡ್ ಗೆದ್ದಾಗ ತಂಡದ ಅಭಿಮಾನಿಗಳಲ್ಲಿ ಇಲ್ಲದ ಸಂತಸ ಮೂಡಿದ್ದು ಕಂಡು ಬಂದಿತು. ತಮ್ಮ ತಂಡ ಪ್ರತಿ ಗೋಲು ಗಳಿಸಿದಾಗಲೂ ಹಾಲೆಂಡ್ ತಂಡದ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.